ಕುಂದಗೋಳ : ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲು ಸಾರಾಯಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕುಂದಗೋಳ ತಾಲೂಕಿನ ದೇವನೂರು ಕ್ರಾಸ್ ಬಳಿ ಇಂದು ಪೊಲೀಸರು ಬಂಧಿಸಿದ್ದಾರೆ.ಹೌದು ! ಬಿಳೇಬಾಳ ಗ್ರಾಮದ ಶಿವನಗೌಡ ಶೇಖರಗೌಡ ನಿಜಲಿಂಗನಗೌಡ್ರ ಎಂಬಾತ ತನ್ನ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲು ಸಾರಾಯಿ ಸಾಗಾಟ ಮಾಡುವ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 2107 ರೂಪಾಯಿ ಮೌಲ್ಯದ 60 ಒರಿಜಿನಲ್ ಚಾಯ್ಸ್ ಟೆಟ್ರಾ ಪಾಕಿಟ್ ವಶಪಡಿಸಿಕೊಂಡು ಕುಂದಗೋಳ ಗ್ರಾಮೀಣ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Kshetra Samachara
23/05/2022 09:32 pm