ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹಂಗರಕಿಯಲ್ಲಿ ವ್ಯಕ್ತಿಯನ್ನು ಕೊಂದು, ಸುಟ್ಟು ಹಾಕಿದ್ರಾ?

ಧಾರವಾಡ: ಧಾರವಾಡ ತಾಲೂಕಿನ ಹಂಗರಕಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಯಾರಿಗೂ ಗೊತ್ತಾಗದಂತೆ ಸುಟ್ಟು ಹಾಕಲಾಗಿದ್ದು, ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.

ರಾಮಪ್ಪ ಕೆಳಗಡೆ (46) ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಈತ ಸಾವನ್ನಪ್ಪಿದ ನಂತರ ಈತನ ಪತ್ನಿ, ಮದ್ಯ ಕುಡಿದು ಸಾವನ್ನಪ್ಪಿದ್ದಾನೆ ಎಂದು ದೂರು ಕೊಟ್ಟಿದ್ದರು. ಆದರೆ, ಇದು ಆಕಸ್ಮಿಕ ಸಾವು ಅಲ್ಲ ಇದೊಂದು ಕೊಲೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಮೃತ ರಾಮಪ್ಪನ ಅಳಿಯ ಈರಪ್ಪ ದೊಡಮನಿ ದೂರು ದಾಖಲಿಸಿದ್ದಾರೆ.

ರಾಮಪ್ಪನನ್ನು ಕೆಲಸಕ್ಕೆಂದು ಕರೆದುಕೊಂಡು ಹೋಗಿ ಹೊಡೆಯಲಾಗಿದೆ. ನಂತರ ಹಂಗರಕಿ ವ್ಯಾಪ್ತಿಯಲ್ಲಿ ಶವವನ್ನು ತಂದು ಸುಟ್ಟು ಹಾಕಲಾಗಿದೆ ಎಂದು ದೂರು ದಾಖಲಿಸಲಾಗಿದೆ. ಇದು ಎಸ್‌ಸಿ, ಎಸ್‌ಟಿ ವ್ಯಾಪ್ತಿಯಲ್ಲಿ ಬರುವುದರಿಂದ ಡಿವೈಎಸ್‌ಪಿ ಅವರೇ ತನಿಖೆ ನಡೆಸಬೇಕಾಗುತ್ತದೆ. ಹೀಗಾಗಿ ಡಿವೈಎಸ್‌ಪಿ ಸಂಕದ ಅವರು ಈ ಸಂಬಂಧ ತನಿಖೆ ನಡೆಸುತ್ತಿದ್ದು, ಸಂಪೂರ್ಣ ತನಿಖೆ ನಂತರ ಈ ಸಾವಿನ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಲಿದೆ.

Edited By : Nagaraj Tulugeri
Kshetra Samachara

Kshetra Samachara

19/05/2022 11:57 am

Cinque Terre

23.96 K

Cinque Terre

0

ಸಂಬಂಧಿತ ಸುದ್ದಿ