ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನ್ಲೈನ್ ನಲ್ಲಿ ಕಾರು ಬಾಡಿಗೆ ಹುಡುಕಾಡುವ ಮುನ್ನ ಎಚ್ಚರ ಎಚ್ಚರ!

ಹುಬ್ಬಳ್ಳಿ: ಪುಣೆಯಲ್ಲಿ ಸೆಲ್ಫ್ ಡ್ರೈವಿಂಗ್ ಕಾರು ಬಾಡಿಗೆ ನೀಡುವುದಾಗಿ ನಂಬಿಸಿ ನಗರದ ಮಹಿಳೆಯೊಬ್ಬರಿಂದ 32,000 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್‌ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಣಕಲ್‌ನ ಲಲಿತಾ ಎಂಬುವರು ಪುಣೆಗೆ ಹೋಗಿ ಸ್ಥಳೀಯವಾಗಿ ಸುತ್ತಾಡುವ ಸಲುವಾಗಿ ಸೆಲ್ಫ್ ಡ್ರೈವಿಂಗ್ ಕಾರು ಬೇಕೆಂದು ಗೂಗಲ್‌ನಲ್ಲಿ ಹುಡುಕಾಡಿದ್ದರು. ಅದರಲ್ಲಿ ಸಿಕ್ಕ ಕೃಷ್ಣ ಕಾರ್ ರೆಂಟಲ್ ಡಾಟ್ ಕಾಮ್ ' ವೆಬ್‌ಸೈಟ್‌ನಲ್ಲಿ ಹೆಸರು ವಿಳಾಸ ದಾಖಲಿಸಿ ಸಬ್‌ಮಿಟ್ ಮಾಡಿದ್ದರು.

ಬಳಿಕ ವ್ಯಕ್ತಿಯೊಬ್ಬ ಕರೆ ಮಾಡಿ ವೆಬ್‌ಸೈಟ್ ಮೂಲಕ 100 ರೂ. ವರ್ಗಾಯಿಸಿ ಎಂದು ಹೇಳಿದ್ದ ಇದನ್ನು ನಂಬಿದ ಲಲಿತಾ ಅವರು ಡೆಬಿಟ್ ಕಾರ್ಡ್‌ನ ಕೆಲ ಮಾಹಿತಿ ಹಾಕಿ 100 ರೂ ವರ್ಗಾಯಿಸಿದ್ದರು. ಇದನ್ನೇ ದುರುಪಯೋಗಪಡಿಸಿಕೊಂಡ ವಂಚಕರು ಲಲಿತಾ ಅವರಿಗೆ ಗೊತ್ತಾಗದಂತೆ 32 ಸಾವಿರ ರೂ ವರ್ಗಾಯಿಸಿಕೊಂಡು ದೂರಿನಲ್ಲಿ ಆರೋಪಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

17/05/2022 12:06 pm

Cinque Terre

16.79 K

Cinque Terre

0

ಸಂಬಂಧಿತ ಸುದ್ದಿ