ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ನಶೆಯಲ್ಲಿ ಕುರಿಗಾಹಿ ಕೊಟ್ಟ ಕೊಡಲಿ ಏಟು ತಿಂದವ ಚಿಕಿತ್ಸೆ ಫಲಿಸದೆ ಜೀವ ಬಿಟ್ಟ

ಕುಂದಗೋಳ: ಮದ್ಯದ ಅಮಲಿನಲ್ಲಿ ಪರಸ್ಪರ ಕುರಿಗಾಹಿಗಳು ಮಾತಿಗೆ ಮಾತು ಬೆಳೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಡಲಿಯಿಂದ ಹೊಡೆದಾಡಿಕೊಂಡು ಕರಿಗಾಹಿಯೊಬ್ಬ ಮೃತಪಟ್ಟ ಘಟನೆ ಕುಂದಗೋಳ ಹೊರವಲಯದ ಬಿಡನಾಳ ರಸ್ತೆಯಲ್ಲಿ ನಡೆದಿದೆ.

ಬಿಡನಾಳ ರಸ್ತೆಯ ಕಣೋಜ ಹಳ್ಳದ ಬಳಿ ವಾಸವಿದ್ದ ಕುರಿಗಾಹಿ ಉಮೇಶ್ ಉದ್ದಪ್ಪ ಮಂಟೂರ ಎಂಬಾತ ಕಳೆದ ಸೋಮವಾರ ಕುಡಿದ ಮತ್ತಿನಲ್ಲಿದ್ದ. ಈ ವೇಳೆ ಕಣೋಜ ಹಳ್ಳದ ಬಳಿ ಕುರಿ ಮೇಯಿಸುತ್ತಿದ್ದ ಇನ್ನೋರ್ವ ಕುರಿಗಾಹಿ ಬಸಪ್ಪ ಯಲ್ಲಪ್ಪ ಚಿಕ್ಕನರಗುಂದ ಜೊತೆಗೆ ಎಂಬಾತನ ಜೊತೆಗೆ ಜಗಳಕ್ಕೆ ಇಳಿದಿದ್ದ. 'ನಾವಿದ್ದಲ್ಲಿ ನೀವ್ಯಾಕೆ ಕುರಿ ಮೇಯಿಸಲು ಬಂದಿದ್ದೀರಿ? ಎಂದು ಕುರಿಗಾಹಿ ಉಮೇಶ್ ತಂಟೆ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ.

ಹಲ್ಲೆಗೆ ಒಳಗಾಗಿ ಗಾಯಗೊಂಡ ಕುರಿಗಾಹಿ ಬಸಪ್ಪನನ್ನು ತಕ್ಷಣ ಆತನ ಸಹಚರರು ಕುಂದಗೋಳ ತಾಲೂಕ ಆಸ್ಪತ್ರೆಗೆ ದಾಖಲಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕುರಿಗಾಹಿ ಇಂದು (ಬುಧವಾರ) ಬೆಳಿಗ್ಗೆ ಮೃತಪಟ್ಟಿದ್ದಾನೆ. ಈ ಘಟನೆ ಕುರಿತಂತೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

11/05/2022 10:26 pm

Cinque Terre

25.37 K

Cinque Terre

2

ಸಂಬಂಧಿತ ಸುದ್ದಿ