ಹುಬ್ಬಳ್ಳಿ: ಕ್ರೆಡಿಟ್ ಕಾರ್ಡ್ ಸ್ಥಗಿತಗೊಳಿಸುತ್ತೇನೆ ಎಂದು ಅಪರಿಚಿತ ವ್ಯಕ್ತಿಯೋರ್ವ ಧಾರವಾಡ ಮಾಳಮಡ್ಡಿಯ ಎಮ್ಮಿಕೇರಿ ಶಾಲೆ ಹತ್ತಿರ ನಿವಾಸಿ ಆನಂದ ದುಂಡಪ್ಪನವರ ಎಂಬುವರಿಗೆ 66 ಸಾವಿರ ವಂಚಿಸಿದ ಪ್ರಕರಣ ಸೈಬರ್ ಠಾಣೆ ದಾಖಲಾಗಿದೆ.
ಆನಂದ ಅವರಿಗೆ ಬ್ಯಾಂಕ್‌ವೊಂದರ ಹೆಸರು ಹೇಳಿ ಕರೆ ಮಾಡಿ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಹೆಚ್ಚಿಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಉತ್ತರಿಸಿದ ಆನಂದ ಅವರು ಬೇಡ ಕ್ರೆಡಿಟ್ ಕಾರ್ಡ್ ಸ್ಥಗಿತಗೊಳಿಸಿ ಎಂದು ಕೇಳಿದ್ದಾರೆ. ನಂತರ ಕ್ರೆಡಿಟ್ ಕಾರ್ಡ್ ಸ್ಥಗಿತ ಮಾಡುತ್ತೇನೆ ಎಂದು ನಂಬಿಸಿ ಮೊಬೈಲ್ ಬ್ಯಾಂಕ್ ಆಪ್ ಓಪನ್ ಮಾಡಿಸಿದ್ದಾರೆ. ಅದರಲ್ಲಿ ಓಟಿಪಿ ಹಾಕಿಸಿ ಅವರ ಬ್ಯಾಂಕ್ ಖಾತೆಯಿಂದ ಒಟ್ಟು 66 ಸಾವಿರ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Kshetra Samachara
06/05/2022 07:30 am