ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಯೊಬ್ಬ ಇಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಹಳೆ ಹುಬ್ಬಳ್ಳಿ ಸದಾಶಿವನಗರ 1ನೇ ಕ್ರಾಸ್ ಮಸೀದಿ ಹತ್ತಿರ ನಡೆದಿದೆ.
ಹಳೆ ಹುಬ್ಬಳ್ಳಿಯ ಅರಬಾಜ್ ಶೇಖ್ ಎಂಬಾತ ಕೊಲೆಗೈಯಲು ಯತ್ನಿಸಿದ ಆರೋಪಿ. ಸದಾಶಿವನಗರದ 1ನೇ ಕ್ರಾಸ್ ನಿವಾಸಿ ಸುಲೇಮಾನ ಫಜಲ್ ಸೈಯದ್ ಮತ್ತು ರಹಿಮ್ ಅನಿಶಾಮ್ ಶೇಖ್ ಎಂಬುವರು ಹಲ್ಲೆಗೊಳಗಾದವರು. ಅರಬಾಜ್ ಶೇಖ್ ಮದುವೆಯಾಗುತ್ತಿರುವ ಹುಡುಗಿಯನ್ನು ಸುಲೇಮಾನ್ ಮದುವೆಯಾಗುತ್ತಾನೆ ಎಂದು ಜಗಳವಾಡಿದ್ದಾನೆ. ಇದೇ ವಿಷಯಕ್ಕೆ ತನ್ನ ಇಬ್ಬರು ಸ್ನೇಹಿತರಾದ ಅಯಾಜ್ ನಗಾರಿ ಮತ್ತು ಮಲ್ಲಿಕ್ ಗುಡ್ಡದ ಎಂಬುವರನ್ನು ಕರೆದುಕೊಂಡು ಬಂದು ಸುಲೇಮಾನ್ ಚಾಕುವಿನಿಂದ ಇರಿದಿದ್ದಾನೆ. ನಂತರ ಇದನ್ನು ನೋಡಿದ ಅವರ ತಮ್ಮ ಹೊಡೆದಾಟ ಬಿಡಿಸಲು ಬಂದಾಗ ಅವನಿಗೆ ಚಾಕುವಿನಿಂದ ಇರಿದು ಜೀವ ಬೆದರಿಕೆ ಹಾಕಿದ್ದಾನೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/05/2022 07:21 am