ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಸಿಡಿಲಿಗೆ ಆಹುತಿಯಾದ ಮೇವಿನ ಬಣಿವೆ

ಕಲಘಟಗಿ : ಸೋಮವಾರ ಪಟ್ಟಣದ ಸುತ್ತಲೂ ಧಾರಾಕಾರ ಮಳೆ ಸುರಿದಿದ್ದು ಸಿಡಿಲಿಗೆ, ಜೋಳದ ಹೊಟ್ಟಿನ ಬಣಿವೆಗೆ ಬೆಂಕಿ ಬಿದ್ದ ಘಟನೆ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

ತಾಲೂಕಿನ ಹಿರೆಹೊನ್ನಿಹಳ್ಳಿ ಗ್ರಾಮದ "ನಿಂಗಪ್ಪ ಯಲಿವಾಳ, (ವಾಲಿ), ಎಂಬುವವರಿಗೆ ಸೇರಿದ ಜೋಳದ ಹೊಟ್ಟಿನ ಬಣಿವೆ. ಸಂಜೆ 7 ಗಂಟೆಯ ಸುಮಾರಿಗೆ ಸಿಡಿಲು ಬಿದ್ದ ಕಾರಣ ಬೆಂಕಿ ತಾಗಿ ಬಣಿವೆಯು ಸಂಪೂರ್ಣ ಸುಟ್ಟು ಬಸ್ಮವಾಗಿದ್ದು, ರೈತನ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ಗ್ರಾಮದ ರೈತರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ: ವಿರೇಶ ಹರೊಗೇರಿ ಕಲಘಟಗಿ

Edited By :
Kshetra Samachara

Kshetra Samachara

26/04/2022 08:27 am

Cinque Terre

33.86 K

Cinque Terre

0

ಸಂಬಂಧಿತ ಸುದ್ದಿ