ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಲ್ಲು ಹೊಡೆದವರಿಗೂ ರಕ್ಷಣೆ ನೀಡಬೇಕಿದೆ ಪೊಲೀಸರು: ಹೇಗಿದೆ ನೋಡಿ ಖಾಕಿ ಪಡೆಯ ಪರಿಸ್ಥಿತಿ

ಹುಬ್ಬಳ್ಳಿ: ಪೊಲೀಸರ ಸ್ಥಿತಿ ಹೇಗಾಗಿದೆ ನೋಡಿ. ಯಾರ ಕೈಯಿಂದ ಕಲ್ಲು ಹೊಡೆಸಿಕೊಂಡಿದ್ರೋ, ಅವರಿಗೆ ಈಗ ರಕ್ಷಣೆ ನೀಡಬೇಕು. ಒಂದು ಕಡೆ ತಪ್ಪು ಮಾಡಿದವರನ್ನು ಹಿಡಿದು ತರಬೇಕು. ಅಲ್ಲದೇ ಅವರನ್ನು ಕೊರ್ಟ್ ಗೆ ಹಾಜರು ಮಾಡಬೇಕು, ಅದರ‌ ನಡುವೆ ನ್ಯಾಯಾಲಯದ ಆದೇಶದಂತೆ ಆರೋಪಿಗಳ ರಕ್ಷಣೆಗೆ ನಿಲ್ಲಬೇಕು.‌ ಇದು ನಮ್ಮ ಪೊಲೀಸ್ ಸ್ಥಿತಿ..

ಹುಬ್ಬಳ್ಳಿ ಗಲಾಟೆ ಎಲ್ಲರಿಗೂ ಗೊತ್ತಲ್ಲ. ಕಳೆದ ಶನಿವಾರ ಇದೇ ಹುಬ್ಬಳ್ಳಿಯಲ್ಲಿ ವಿವಾದಾತ್ಮಕ ಪೋಸ್ಟ ಒಂದನ್ನು ಹಾಕಿದ ಅಭಿಷೇಕ ಹಿರೇಮಠ ಎಂಬುವವನಿಂದ ಆರಂಭವಾದ ಈ ಗಲಾಟೆ, ‌ಕಲ್ಲು ತೂರಾಟದವರೆಗೆ ಬಂದು‌ ನಿಂತಿತ್ತು. ಅದರಲ್ಲಿ ಸುಮಾರು 11 ಪೊಲೀಸರು ಕಲ್ಲೇಟು ತಿಂದರು. ಈಗ ಅದೇ ಪೊಲೀಸ್ ಅವರೆಲ್ಲರ ರಕ್ಷಣೆಗೆ ನಿಲ್ಲುವಂತೆ ಆಗಿದೆ. ಯಾವ ರೀತಿ ರಕ್ಷಣೆ ಎಂದರೆ, ವಿವಾದಾತ್ಮಕ ಪೋಸ್ಟ್ ಮಾಡಿ ಗಲಾಟೆಗೆ ಕಾರಣವಾದ ಅಭಿಷೇಕ ನಿನ್ನೆ ಪಿಯುಸಿ ಪರೀಕ್ಷೆಗೆ ಬರುತಿದ್ದ. ಆತನಿಗೆ ರಕ್ಷಣೆ ನೀಡಿದ್ದು ಇದೇ ಪೊಲೀಸ್. ಅಲ್ಲದೇ ಇದೇ ಪೊಲೀಸರ ಮೇಲೆ ಕಲ್ಲು ಎಸೆದಿದ್ದ ಆರೋಪಿ ಮಹಮ್ಮದ್ ಸಾಧಿಕ್ ಕೂಡಾ ಸೋಮವಾರ ಪಿಯುಸಿ ಪರೀಕ್ಷೆ ಬರೆಯಲಿದ್ದಾನೆ. ಆತನಿಗೆ ಕೂಡಾ ನ್ಯಾಯಾಲಯದ ಆದೇಶದಂತೆ ರಕ್ಷಣೆ ನೀಡಿ ಪರೀಕ್ಷೆಗೆ ಕರೆ ತರಬೇಕಿದೆ..

ಇನ್ನೂ ಪೊಲೀಸರಿಗೆ ಇದಷ್ಟೇ ಕೆಲಸವಲ್ಲ. ಇವರು ಕಲ್ಲು ಹೊಡೆದ ಆರೋಪಿಗಳಿಗೆ ಇನ್ನೂ ಹುಡುಕುತಿದ್ದಾರೆ. ಅವರನ್ನು ಬಂಧಿಸಬೇಕು, ಅಲ್ಲದೆ ಬಂಧಿಸಿದ ಮೇಲೆ ಅವರಿಗೆ ನ್ಯಾಯಾಲಯಕ್ಕೆ ಹಾಗೂ ಜೈಲಿಗೆ ಕೂಡಾ ಕರೆದುಕೊಂಡು ಹೋಗುವ ಕೆಲಸ‌ ಮಾಡಬೇಕು. ಮನೆ ಮಠ ಬಿಟ್ಟು ಈ‌ ಪೊಲೀಸರು ಈಗ ಕರ್ತವ್ಯ ಮಾಡುತಿದ್ದಾರೆ‌. ಅಲ್ಲದೇ ಕಲ್ಲು ಹೊಡೆಸಿಕೊಂಡರೂ ತಮ್ಮ ಕರ್ತವ್ಯದಿಂದ ಇವರು ಹಿಂದೆ ಸರಿಯುತ್ತಿಲ್ಲ. ಎಲ್ಲರ ಆದೇಶದಂತೆ ಕರ್ತವ್ಯ ನಿರ್ವಹಣೆ ಮಾಡುತಿದ್ದಾರೆ‌..

ಒಟ್ಟಿನಲ್ಲಿ ಏನೇ ಇದ್ದರೂ ಈ ಪೊಲೀಸರು ನಮಗೆ ಬೇಕು.‌ ಕಲ್ಲು ಹೊಡೆದ ಆರೋಪಿಗಳಿಗೆ ತರುವುದರ ಜೊತೆಗೆ‌‌ ವಿವಾದ ಮಾಡಿದವರ ರಕ್ಷಣೆಗೆ ನಿಲ್ಲಬೇಕು ಇವರು.‌ ನಿಜವಾಗಿಯೂ ಇವರಿಗೆ ನಾವೇ ಸೆಲ್ಯುಟ್ ಹೊಡೆಯಬೇಕು.

Edited By : Shivu K
Kshetra Samachara

Kshetra Samachara

24/04/2022 08:23 am

Cinque Terre

60.04 K

Cinque Terre

14

ಸಂಬಂಧಿತ ಸುದ್ದಿ