ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಎಮ್ಐಎಮ್ ಮುಖಂಡ ಮಹಮ್ಮದ್ ಆರಿಫ್ ಎಂಬಾತನನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಗಲಭೆ ನಡೆದ ದಿನ ಪೊಲೀಸರ ಜತೆ ವಾಗ್ವಾದ ಮಾಡಿದ್ದ ಆರಿಫ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಗಲಾಟೆಗೆ ಪ್ರಚೋದನೆ ನಡೆದಿದ್ದ ಎರಡನೇ ಮಾಸ್ಟರ್ ಮೈಂಡ್ ಎಂದು ಬಿಂಬಿತವಾಗಿದ್ದ ಮಹಮ್ಮದ್ ಆರಿಫ್ನನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಮೌಲ್ವಿ ವಾಸಿಂ ಪಠಾಣ್ ಜತೆ ಪೊಲೀಸ್ ಇನ್ಸ್ಪೆಕ್ಟರ್ ಜೊತೆ ವಾದ ಮಾಡಿದ್ದ ಮಹಮ್ಮದ್ ಆರಿಫ್. ಗಲಭೆಯ ನಂತರ ತಲೆಮರೆಸಿಕೊಂಡಿದ್ದ. ಆದರೆ ಇದೀಗ ಆರಿಫ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ಗಲಭೆಯಲ್ಲಿ ಆರಿಫ್ ಪಾತ್ರದ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
21/04/2022 02:13 pm