ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೆವೈಸಿ ಅಪ್ಡೇಟ್ ಹೆಸರಲ್ಲಿ 2.09 ಲಕ್ಷ ರೂ. ವಂಚನೆ: ಸೈಬರ್ ಠಾಣೆಯಲ್ಲಿ ಪ್ರಕರಣ

ಹುಬ್ಬಳ್ಳಿ: ಸೈಬರ್ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಈ ಬಗ್ಗೆ ಸಾಕಷ್ಟು ಸಾರ್ವಜನಿಕ ಜಾಗೃತಿ ಮೂಡಿಸಿದರೂ ಕೂಡ ಜನರು ಮಾತ್ರ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮತ್ತೊಂದು ಸೈಬರ್ ಕ್ರೈಂ ಪ್ರಕರಣ ಬೆಳಕಿಗೆ ಬಂದಿದದೆ.

ಹೌದು..ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ. ಕೂಡಲೆ ಕೆವೈಸಿ ಆಪ್ಲೇಟ್ ಮಾಡಿ' ಎಂದು ನಿವೃತ್ತ ನೌಕರರೊಬ್ಬರಿಗೆ ಸಂದೇಶ ಕಳುಹಿಸಿ, ವಿವಿಧ ಮಾಹಿತಿ ಪಡೆದು 2,09,344 ರೂ. ನಗದು ವರ್ಗಾಯಿಸಿಕೊಂಡು ವಂಚಿಸಿದ ಕೃತ್ಯ ನಡೆದಿದೆ.

ಧಾರವಾಡ ಭಾರತಿ ನಗರದ ಎ.ಎಸ್. ಕೊಣ್ಣೂರು ಎಂಬುವರ ಮೊಬೈಲ್‌ಗೆ ಏ.13ರಂದು ಅಪರಿಚಿತರು ಸಂದೇಶ ಕಳುಹಿಸಿದ್ದರು. 'ನಿಮ್ಮ ಖಾತೆ ಬ್ಲಾಕ್ ಆಗಿದೆ. ಕೆವೈಸಿ ಅಪ್ಲೇಟ್ ಮಾಡಿ' ಎಂದು ತಿಳಿಸಿದ್ದರು. ಇದನ್ನು ನಂಬಿದ ಕೊಣ್ಣೂರು ಅವರು ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದಾಗ, ತಾವು ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ, ಬ್ಯಾಂಕ್ ಅಕೌಂಟ್ ನಂಬರ್‌, ಎಟಿಎಂ ನಂಬರ್, ಸಿವಿವಿ ನಂಬರ್ ಹಾಗೂ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಹು-ಧಾ ಸೈಬರ್‌ ಕ್ರೈಂ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

16/04/2022 08:43 am

Cinque Terre

29.33 K

Cinque Terre

3

ಸಂಬಂಧಿತ ಸುದ್ದಿ