ಲಕ್ಷ್ಮೇಶ್ವರ : ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡ ಹೊರಟಿದ್ದ ವ್ಯಕ್ತಿಯೊಬ್ಬರ ಬೈಕ್ ನಿಂದ ಖದೀಮರು ಸಿನಿಮೀಯ ರೀತಿಯಲ್ಲಿ ವಂಚನೆ ಮಾಡಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.
ರಾಮನಗೌಡ ಪಕ್ಕೀರಗೌಡ ಪಾಟೀಲ್ ಎಂಬುವವರು. ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಕ್ಷ್ಮೇಶ್ವರ ಬ್ಯಾಂಕಿನಿಂದ 10 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಹೊರಟ್ಟಿದ್ದ ವೇಳೆ ಖದೀಮರು ಬೈಕ್ ನಲ್ಲಿದ್ದ ಹಣದ ಬ್ಯಾಗನ್ನು ಫಿಲ್ಮ್ ಸ್ಟೈಲ್ ನಲ್ಲಿ ಕದ್ದು ಪರಾರಿಯಾಗಿದ್ದಾರೆ. ಕಳ್ಳರು ದೋಚಿಕೊಂಡು ಹೋಗಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ಲಕ್ಷ್ಮೇಶ್ವರ ಪಟ್ಟಣದ ಲಕ್ಷ್ಮೀ ನಗರದಲ್ಲಿರುವ ಓಂ ಪ್ರಕಾಶ ಜೈನ್ ರವರ ದಲ್ಲಾಳಿ ಅಂಗಡಿಯಲ್ಲಿ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿರುವ ರಾಮನಗೌಡ ಅವರು ಹಣವನ್ನು ಡ್ರಾ ಮಾಡಿಸಲು ಬ್ಯಾಂಕಿಗೆ ಬಂದಿದ್ದಾರೆ.
ಇವರ ಬಗ್ಗೆ ಮಾಹಿತಿ ಕಲೆ ಹಾಕಿರುವ ಖದೀಮರು ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/04/2022 10:58 am