ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಮಣ್ಣಿನಲ್ಲಿದ್ದ ಶವವನ್ನು ಹೊರ ತೆಗೆದ ಅಧಿಕಾರಿಗಳು: ಅಪರಿಚಿತನ ನೋಡಲು ಬಂದ ಬಂಧುಗಳು...!

ಹುಬ್ಬಳ್ಳಿ : ಕಳೆದ ಒಂದೆರಡು ದಿನಗಳ ಹಿಂದೆಯಷ್ಟೆ ವಾಣಿಜ್ಯನಗರಿ ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಶವವೊಂದು ಪತ್ತೆಯಾಗಿತ್ತು. ಅಪರಿಚಿತ ಶವ ಎಂದು ಸರ್ಕಾರದ ನಿರ್ದೇಶನದ ಮೇರೆಗೆ ಶವ ಸಂಸ್ಕಾರ ಮಾಡಲಾಗಿತ್ತು. ಆದರೆ ಇಂದು ಆ ಶವವನ್ನು ಪುನಃ ಹೊರ ತೆಗೆಯಲಾಗಿದೆ.

ಹೌದು.. ಇಂದು ಮಧ್ಯಾಹ್ನ ಬಿಡನಾಳ ರುದ್ರಭೂಮಿಯಲ್ಲಿ ಉಪವಿಭಾಗಾಧಿಕಾರಿಗಳ ಸಮಕ್ಷಮದಲ್ಲಿ ಮುಜಾಫರ್ ಕಲಾದಗಿ ಅವರ ಶವ ಹೊರ ತೆಗೆಯಲಾಯಿತು.

ಅಪರಿಚಿತ ಶವ,ಯಾವುದೇ ವಾರಸುದಾರರು ಇಲ್ಲದಿರುವ ಹಿನ್ನೆಲೆಯಲ್ಲಿ ಮತ್ತು ಒಂದು ಹಂತದಲ್ಲಿ ಶವ ಕೊಳೆತ ರೀತಿಯಲ್ಲಿರುವುದರಿಂದ ಶವಗಾರದಲ್ಲಿ ಇಟ್ಟುಕೊಳ್ಳಲು ವೈದ್ಯರು ನಿರಾಕರಿಸಿದ್ದು, ಪಾಲಿಕೆಯ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಲಾಗಿತ್ತು. ಆದರೆ ಈಗ ಏಕಾಏಕಿ ಶವದ ವಾರಸುದಾರರು ಆಗಮಿಸಿದ್ದು, ಶವವನ್ನು ಹೊರತೆಗೆದಿದ್ದಾರೆ.

ಒಟ್ಟಿನಲ್ಲಿ ಮಣ್ಣಿನಲ್ಲಿ ಹುದುಗಿದ್ದ ಕೊಳೆತ ರೀತಿಯಲ್ಲಿದ್ದ ಶವ ಈಗ ಹೊರ ಬಿದ್ದಿದೆ. ಇನ್ನು ಶವ ಹೊರತೆಗೆಯುವ ಕಾರ್ಯಾಚರಣೆಯಲ್ಲಿ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Edited By : Nagesh Gaonkar
Kshetra Samachara

Kshetra Samachara

08/04/2022 10:28 pm

Cinque Terre

31.05 K

Cinque Terre

1

ಸಂಬಂಧಿತ ಸುದ್ದಿ