ಧಾರವಾಡ: ಕ್ರಿಕೆಟ್ ಆಟ ಆಡಿ ವಿಶ್ರಾಂತಿ ಪಡೆಯುವಾಗ ಆಟಗಾರ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಸಂಗೊಳ್ಳಿ ರಾಯಣ್ಣ ನಿವಾಸಿ ಮುನ್ನಾ ಇರ್ಕಲ್ ಸಾವನ್ನಪ್ಪಿದ ದುರ್ದೈವಿ. ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನ ಆವರಣದಲ್ಲಿ ಕ್ರಿಕೆಟ್ ಆಡಿ ಕುಳಿತ್ತಿದ್ದರು. ಈ ವೇಳೆ ವಿಶ್ರಾಂತಿ ಪಡೆಯುತ್ತಿದ್ದಾಗ ಮುನ್ನಾಗೆ ಲಘು ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
Kshetra Samachara
03/04/2022 07:19 pm