ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕೆಲವೇ ಗಂಟೆಗಳಲ್ಲಿ ದರೋಡೆಕೋರರ ಹೆಡೆಮುರಿ ಕಟ್ಟಿದ ಪೊಲೀಸರು

ಅಣ್ಣಿಗೇರಿ: ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ-ಗದಗ ಮಾರ್ಗ ಮಧ್ಯದ ಭದ್ರಾಪುರ ಆರ್ಯರ ಬ್ರಿಜ್ ಹತ್ತಿರ ಎರಡು ದಿನಗಳ ಹಿಂದೆ ಡಕಾಯಿತರ ಗುಂಪೊಂದು ವಾಹನ ಅಡ್ಡಗಟ್ಟಿ 1 ಲಕ್ಷ 22 ಸಾವಿರ ಹಣ ದರೋಡೆ ಮಾಡಿ, ಇಬ್ಬರಿಗೆ ಗಂಭೀರ ಗಾಯ ಮಾಡಿ ಪರಾರಿಯಾಗಿದ್ದರು.

ಈ ಹಿನ್ನೆಲೆಯಲ್ಲಿ ನವಲಗುಂದ ಸಿಪಿಐ ಚಂದ್ರಶೇಖರ ಮಠಪತಿ ಹಾಗೂ ಅಣ್ಣಿಗೇರಿ ಪಿಎಸ್ ಐ ಲಾಲ್ ಸಾಬ್ ಜೂಲಕಟ್ಟಿ ಅವರ ನೇತೃತ್ವದಲ್ಲಿ ದರೋಡೆಕೋರರನ್ನು ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮಾ.30ರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ಹತ್ತಿರ ಟಾಟಾ ಕಂಪನಿಯ ಗೂಡ್ಸ್ ವಾಹನದಲ್ಲಿ ಹೋಗುತ್ತಿರುವ ವೇಳೆಯಲ್ಲಿ ದರೋಡೆಕೋರರ ಬಂಧನ ಮಾಡಿ, ಠಾಣೆಗೆ ಕರೆತಂದಿದ್ದಾರೆ.

ಇನ್ನೂ ದರೋಡೆಕೋರರನ್ನು ತನಿಖೆಗೆ ಒಳಪಡಿಸಿ, 96 ಸಾವಿರ ರೂ.ನಗದು ಜಪ್ತಿ ಮಾಡಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಪೊಲೀಸರ ಈ ಕಾರ್ಯಕ್ಕೆ ಪಟ್ಟಣದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Shivu K
Kshetra Samachara

Kshetra Samachara

31/03/2022 09:01 am

Cinque Terre

63.02 K

Cinque Terre

15

ಸಂಬಂಧಿತ ಸುದ್ದಿ