ಧಾರವಾಡ: ಧಾರವಾಡದ ಹೆಸರು ಹೇಳಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ಕೆಲ ಮಹಿಳೆಯರು ಯುವಕರಿಂದ ಹಣ ಪೀಕುತ್ತಿದ್ದಾರೆ.
9980901274 ಈ ನಂಬರ್‌ಗೆ ಕರೆ ಮಾಡಿದರೆ ಓರ್ವ ಮಹಿಳೆ ರಿಸೀವ್ ಮಾಡುತ್ತಾಳೆ. ಆಕೆ ಫೋನ್ ರಿಸೀವ್ ಮಾಡಿದ ತಕ್ಷಣ ಧಾರವಾಡ ಹೊಸ ಬಸ್ ನಿಲ್ದಾಣ ಬಳಿ ಬಂದು ಫೋನ್ ಮಾಡಿ ಎನ್ನುತ್ತಾಳೆ. ಆಕೆಯ ʼಮಾಯʼದ ಮಾತಿಗೆ ಮರುಳಾಗಿ ಇದೀಗ ಅನೇಕರು ಸಾವಿರಾರು ಹಣ ಕಳೆದುಕೊಂಡಿದ್ದಾರೆ.
ಅಡ್ವಾನ್ಸ್ ಪೇಮೆಂಟ್ ಮಾಡಿ, ರೂಮ್ ರೆಂಟ್ ಸೆಂಡ್ ಮಾಡಿ, ಸೆಕ್ಯೂರಿಟಿ ಪರ್ಪಸ್ ಹಣ ಹಾಕಿ. ನಾನು ನೀವು ಇದ್ದಲ್ಲೇ ಬಂದು ಪಿಕಪ್ ಮಾಡುತ್ತೇನೆ ಎನ್ನುತ್ತಾಳೆ. ಆದರೆ, ಹಣ ಆಕೆಯ ಅಕೌಂಟ್‌ಗೆ ಬೀಳುತ್ತಿದ್ದಂತೆಯೇ ಮತ್ತೊಂದು ಸಬೂಬು ಹೇಳಿ ಹಣ ಪೀಕುತ್ತಾಳೆ. ಕೊನೆಗೆ ಫೋನನ್ನೇ ರಿಸೀವ್ ಮಾಡದೇ ಕಟ್ ಮಾಡುತ್ತಾಳೆ. ಆಕೆಯೊಂದಿಗೆ ಕೆಲವರು ಮಾತನಾಡಿರುವ ಆಡಿಯೋ ನಮಗೆ ಲಭ್ಯವಾಗಿದೆ. ಬನ್ನಿ... ಆಕೆ ಏನೆಲ್ಲ ಮಾತನಾಡಿದ್ದಾಳೆ ಅನ್ನೋದನ್ನ ಕೇಳೋಣ.
ಕೇಳಿದ್ರಲ್ಲ, ಹೀಗೆ ಮಾತನಾಡುವ ಈಕೆ ಬೇರೆ ಬೇರೆ ನಂಬರ್‌ನಿಂದ ಕರೆ ಮಾಡಿದರೆ ಒಬ್ಬೊಬ್ಬರಿಗೆ ಒಂದೊಂದು ವಿಳಾಸ ಹೇಳುತ್ತಾಳೆ. ಅಷ್ಟೇ ಅಲ್ಲ 8050577384 ಈ ನಂಬರ್‌ಗೆ ಫೋನ್ ಪೇ ಮಾಡುವಂತೆಯೂ ಹೇಳುತ್ತಾಳೆ. ಆಕೆ ಹೇಳಿದಂತೆ ಕೇಳಿದ ಅನೇಕರು ಇದೀಗ ಸಾವಿರಾರು ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಕೂಡಲೇ ಅವಳಿನಗರದ ಸೈಬರ್ ಕ್ರೈಂ ಪೊಲೀಸರು ಈ ಜಾಲವನ್ನು ಪತ್ತೆ ಮಾಡಬೇಕಾಗಿದೆ.
Kshetra Samachara
28/03/2022 10:27 pm