ಕುಂದಗೋಳ : ಇದು ಕಳ್ಳರ ಜಾಣತನವೋ, ಆರಕ್ಷಕರ ನಿರ್ಲಕ್ಷ್ಯವೋ ಗೊತ್ತಿಲ್ಲಾ. ಇಲ್ಲೊಂದು ದೇವಸ್ಥಾನದ ಕಾಣಿಕೆ ಸಂಗ್ರಹದ ಪೆಟ್ಟಿಗೆ ಬರೋಬ್ಬರಿ ಮೂರನೇ ಬಾರಿ ಕಳ್ಳರ ಪಾಲಾಗಿದೆ.
ಕುಂದಗೋಳ ತಾಲೂಕಿನ ವಿಠಲಾಪೂರ ಗ್ರಾಮದ ಹೊರವಲಯದಲ್ಲಿ ನಿರ್ಮಿಸಲಾಗಿರುವ ಗೂಳಿ ಬಸವೇಶ್ವರ ದೇವಸ್ಥಾನದಲ್ಲಿ ಭಕ್ತರ ಕಾಣಿಕೆ ಸಂಗ್ರಹದ ಪೆಟ್ಟಿಗೆಯನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಇಂದು ಬೆಳಗ್ಗೆ ದೇವಸ್ಥಾನದ ಅರ್ಚಕರು ಎಂದಿನಂತೆ ಬಸವೇಶ್ವರನ ಪೂಜೆಗೆ ಬಂದ ಸಂದರ್ಭದಲ್ಲಿ ದೇವಸ್ಥಾನದ ಹುಂಡಿ ಕಳ್ಳತನ ಆದದ್ದನ್ನು ಕಂಡು ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಹಿಂದೆ ಇದೇ ಗೂಳಿ ಬಸವೇಶ್ವರ ದೇವಸ್ಥಾನದ ಕಾಣಿಕೆ ಡಬ್ಬ ಎರಡು ಬಾರಿ ಕಳ್ಳತನವಾಗಿತ್ತು, ಇದೀಗ ಮೂರನೆಯ ಬಾರಿಯೂ ಕಳ್ಳತನವಾಗಿದ್ದು ಪೋಲಿಸ್ ಇಲಾಖೆಯವರು ಕೂಡಲೇ ಆರೋಪಿಗಳ ಪತ್ತೆ ಹಚ್ಚಿ ತಕ್ಕ ಶಾಸ್ತಿ ಮಾಡಿ ಎಂದು ಗ್ರಾಮಸ್ಥರಾದ ಈರಪ್ಪ ಬಾರಕೇರ ಪಬ್ಲಿಕ್ ನೆಕ್ಸ್ಟ್ ಮೂಲಕ ವೀಡಿಯೋ ಮುಖಾಂತರ ಮನವಿ ಮಾಡಿದ್ದಾರೆ.
Kshetra Samachara
17/03/2022 03:36 pm