ಧಾರವಾಡ: ಬಿಜೆಪಿ ಮಹಿಳಾ ಮೋರ್ಚಾ ಧಾರವಾಡ-71 ರ ಅಧ್ಯಕ್ಷೆ ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಮರೇವಾಡ ಗ್ರಾಮದಲ್ಲಿ ಸಂಭವಿಸಿದೆ.
ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಅಮರಗೋಳ ಎಂಬುವವರೇ ತಮ್ಮ ಮಗಳೊಂದಿಗೆ ಸೇರಿ ಪತಿ ಈರಣ್ಣನನ್ನು ಹತ್ಯೆ ಮಾಡಿದ್ದಾರೆಂದು ಗೊತ್ತಾಗಿದೆ. ಕುಡಿದ ಮತ್ತಿನಲ್ಲಿ ತನ್ನ ಮಡದಿಯೊಂದಿಗೆ ಜಗಳ ತೆಗೆದ ಸಮಯದಲ್ಲಿಯೇ ಮಡದಿ ಹಾಗೂ ಮಗಳು ಹೊಡೆದು ಕೊಲೆ ಮಾಡಿದ್ದಾರೆನ್ನಲಾಗಿದೆ.
ಘಟನೆಯ ಬಗ್ಗೆ ಸತ್ಯ ಹೇಳದೇ ಕಥೆಗಳನ್ನು ಸೃಷ್ಟಿಸುವ ಪ್ರಯತ್ನ ನಡೆದಿತ್ತಾದರೂ ಪೊಲೀಸರ ಮಾಹಿತಿಯಿಂದ ಸತ್ಯ ಹೊರಬಿದ್ದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ-ಮಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
Kshetra Samachara
12/03/2022 08:22 am