ಹುಬ್ಬಳ್ಳಿ: ಬ್ಯಾಂಕ್ ಖಾತೆಗೆ ಕೆವೈಸಿ ಹಾಗೂ ಪಾನ್ ಕಾರ್ಡ್ ಅಪ್ಲೇಟ್ ಮಾಡುವ ನೆಪದಲ್ಲಿ ನಗರದ ವ್ಯಕ್ತಿಯೊಬ್ಬರ ಖಾತೆಯಿಂದ 59,580 ರೂ. ನಗದು ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯ ನಗರದ ಅಭ್ಯುದಯ ಜೇಸುದಾಸ ಎಂಬುವರ ಮೊಬೈಲ್‌ಗೆ ಕೆವೈಸಿ ಹಾಗೂ ಪಾನ್ ಕಾರ್ಡ್ ಅಪ್‌ಡೇಟ್ ಮಾಡುವಂತೆ ಸಂದೇಶ ಬಂದಿತ್ತು. ಒಂದು ವೇಳೆ ಅಪ್‌ಡೇಟ್ ಮಾಡದಿದ್ದರೆ ಖಾತೆ ಬ್ಲಾಕ್ ಆಗುತ್ತದೆಂದು ತಿಳಿಸಲಾಗಿತ್ತು.
ಇದನ್ನು ನಂಬಿದ ಅಭ್ಯುದಯ ಅವರು ಸಂದೇಶದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ ಅದರಲ್ಲಿ ಕೇಳಲಾದ ಎಲ್ಲ ಮಾಹಿತಿ ನೀಡಿ, ಒಟಿಪಿ ಹಾಕಿದ್ದರು. ಇದಾದ ಕೆಲ ಹೊತ್ತಿನಲ್ಲೇ ವಂಚಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ನೀಡಿದ್ದಾರೆ.
Kshetra Samachara
10/03/2022 12:23 pm