ಹುಬ್ಬಳ್ಳಿ: ನಗರದ ಸುಪ್ರಸಿದ್ಧ ಸಿದ್ಧಾರೂಢಮಠದಲ್ಲಿ ಉಭಯ ಶ್ರೀಗಳ ಗದ್ದುಗೆ ದರ್ಶನ ಪಡೆದು ಸಿದ್ಧಾರೂಢರ ರಥೋತ್ಸವ ನೋಡಲು ಬಂದ ಭಕ್ತರೊಬ್ಬರ ಮಂಗಳ ಸೂತ್ರವನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಕುಟುಂಬದವರ ಜತೆ ರಥೋತ್ಸವ ವೈಭವ ಸವಿಯುತ್ತಿದ್ದ ನಾಗಶೆಟ್ಟಿಕೊಪ್ಪದ ವಿಜಯಲಕ್ಷ್ಮಿ ವಾಲಿ ಅವರ ಕೊರಳಲ್ಲಿನ 1.80 ಲಕ್ಷ ರೂ ಮೌಲ್ಯದ 40 ಗ್ರಾಂ ಬಂಗಾರದ ಮಾಂಗಲ್ಯ ಚೈನು ನೋಡು ನೋಡುತ್ತಲೇ ಮಾಯವಾಗಿದೆ.
ಕಳೆದ ವರ್ಷಕ್ಕಿಂತ ಈ ಬಾರಿ ಜಾತ್ರೆಯಲ್ಲಿ ಸಾಗರದಂತೆ ಹರಿದು ಬಂದ ಭಕ್ತರ ಸಂಖ್ಯೆಯನ್ನು ಬಂಡವಾಳವಾಗಿ ಉಪಯೋಗಿಸಕೊಂಡ ಕಳ್ಳರು, ಮಠದ ಒಳಗೆ-ಹೊರಗೆ ಮತ್ತು ಜನನಿಬೀಡ ಸ್ಥಳದಲ್ಲಿ ಕಳ್ಳರ ಗುಂಪು ಚಾಣಕ್ಷತನದಿಂದ ಮಹಿಳೆಯ ಕೊರಳಲ್ಲಿನ ಚಿನ್ನದ ಮಾಂಗಲ್ಯ ಸರ ಕದ್ದಿದ್ದಾರೆ.
ಈ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Kshetra Samachara
07/03/2022 09:04 am