ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂಟಿ ಮಹಿಳೆಯರು ಹುಬ್ಬಳ್ಳಿಗೆ ಬರಬೇಕು ಅಂದ್ರೆ ಹುಷಾರ.!

ಹುಬ್ಬಳ್ಳಿ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಗೆ ಬರಬೇಕು ಅಂದರೆ ಎಚ್ಚರ. ಒಂಟಿ ಹೆಣ್ಣುಮಕ್ಕಳು ಬರಬೇಕು ಅಂದರೆ ಇನ್ನೂ ಎಚ್ಚರ ವಹಿಸಲೇಬೇಕು. ಯಾಕೆ ಗೊತ್ತಾ.? ಈ ಸ್ಟೋರಿ ನೋಡಿ.

ಹೌದು. ಮೊನ್ನೆಯಷ್ಟೇ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಡೆದ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ರೇಪ್‌ ಕೇಸ್‌ ಬೆಳಕಿಗೆ ಬಂದಿದೆ. ಹೊರ ಜಿಲ್ಲೆಯಿಂದ ಬಂದಿರುವ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಸಹಾಯ ಮಾಡುವ ನೆಪದಲ್ಲಿ ಹುಬ್ಬಳ್ಳಿಯ ಯುವಕರಿಬ್ಬರು ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾರೆ. ಹುಬ್ಬಳ್ಳಿಯ ಅಭಿಷೇಕ್ (27), ಪ್ರವೀಣ (25) ಇಂತಹ ಹೀನ ಕೃತ್ಯ ಎಸಗಿದವರು.

ಆರೋಪಿಗಳಾದ ಅಭಿಷೇಕ್ ಹಾಗೂ ಪ್ರವೀಣ ಹೊರ ಜಿಲ್ಲೆಯಿಂದ ಹುಬ್ಬಳ್ಳಿಗೆ ಬಂದಿರುವ ಬಾಲಕಿರನ್ನು ಪರಿಚಯ ಮಾಡಿಕೊಂಡಿದ್ದರು. ನಂತರ ಸಲುಗೆ ಬೆಳೆಸಿಕೊಂಡು ಎರಡು ದಿನಗಳ ಕಾಲ ಗದಗ, ಹಾವೇರಿಯ ಪಾರ್ಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸುತ್ತಾಡಿಸಿದ್ದರು. ಮೂರನೇ ದಿನ ಕಾಮುಕರು ಅಪ್ರಾಪ್ತಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಈ ಸಂಬಂಧ ಸಂತ್ರಸ್ತೆಯೊಬ್ಬರು ಕೀಚಕನ ಫೋನ್‌ ಮೂಲಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಆಕೆಯ ಪೋಷಕರು ಉಪನಗರ ಠಾಣೆಗೆ ಬಂದಿದ್ದಾರೆ. ಈ ವೇಳೆ ಅಭಿಷೇಕ್ ಹಾಗೂ ಪ್ರವೀಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ನಂತರ ಉಪನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಇನ್ಸ್‌ಪೆಕ್ಟರ್ ರವಿಚಂದ್ರನ್ ನೇತೃತ್ವದಲ್ಲಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿ, ಆರೋಪಿಗಳನ್ನು ಪೋಕ್ಸೋ ಕಾಯಿದೆ ಅಡಿಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಟ್ಟಿನಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಹಾಗೂ ಗುರುತು ಪರಿಚಯ ಇಲ್ಲದವರೊಂದಿಗೆ ವ್ಯವಹಾರ ಮಾಡುವುದು ಸಮಸ್ಯೆಗೆ ಆಹ್ವಾನ ನೀಡುವುದಂತೂ ಸತ್ಯ. ಹೀಗಿದ್ದರೂ ಜನರು ಮೋಸ ಹೋಗುತ್ತಾರೆ. ಇಂತಹ ಜಾಲಗಳನ್ನು ಪತ್ತೆ ಹಚ್ಚುವ ಮೂಲಕ ಈ ರೀತಿಯ ಪ್ರಕರಣಗಳಿಗೆ ಪೊಲೀಸ್ ಕಮೀಷನರೇಟ್ ಬ್ರೇಕ್ ಹಾಕಬೇಕಿದೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/03/2022 03:05 pm

Cinque Terre

174.77 K

Cinque Terre

11

ಸಂಬಂಧಿತ ಸುದ್ದಿ