ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೋಸ್ತಿ ಹೆಸರಲ್ಲಿ ಮಹಿಳೆಯಿಂದ ಮಹಿಳೆಗೆ ದೋಖಾ: ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋದ ಮಹಿಳೆ

ಹುಬ್ಬಳ್ಳಿ ಹೇಳಿ ಕೇಳಿ ಛೋಟಾ ಮುಂಬೈ ಅಂತ ಕರೆಯಿಸಿಕೊಳ್ಳುವ ನಗರ. ಈ ನಗರದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಮುಗ್ಧರನ್ನು ವಂಚಿಸುವುದೇ ಒಂದು ಉದ್ಯೋಗವಾಗಿದೆ. ದೋಸ್ತಿ ಹೆಸರಲ್ಲಿ ದೋಖಾ ಮಾಡಿ ಮಹಿಳೆಯೊಬ್ಬರಿಗೆ ಮಹಿಳೆಯಿಂದಲೇ ದೋಖಾ ನಡೆದಿದೆ. ಹಾಗಿದ್ದರೇ ಏನಿದು ದೋಖಾ ಅಂತೀರಾ ಈ ಸ್ಟೋರಿ ನೋಡಿ.

ಹೀಗೆ ಕೈಯಲ್ಲಿ ಕಾಗದ ಪತ್ರವನ್ನು ಹಿಡಿದುಕೊಂಡು ಕಣ್ಣೀರು ಹಾಕುತ್ತಿರುವ ಮಹಿಳೆಯ ಹೆಸರು ಗಂಗಮ್ಮ ಸಂಶಿ. ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿ ವಾಸ ಮಾಡುತ್ತಿರುವ ಇವರು ಮೂಲತಃ ಲಿಂಗದಾಳದವರಾಗಿದ್ದು, ಪ್ರಸ್ತುತವಾಗಿ ವಿದ್ಯಾನಗರದ ಅಕ್ಷಯ ಕಾಲೋನಿಯ ಶೋಭಾ ನವಲಗುಂದ ಎಂಬುವ ಮಹಿಳೆಯಿಂದ ಮೋಸ ಹೋಗಿದ್ದಾರೆ. ಹೌದು. ಕಳೆದ 2018 ರಿಂದಲೂ ಶೋಭಾ ಅವರನ್ನು ನಂಬಿ ಹಲವು ವ್ಯವಹಾರ ನಡೆಸಿಕೊಂಡು ಬಂದಿದ್ದ ಇವರಿಗೆ, ದೋಸ್ತಿ ನೆಪದಲ್ಲಿ ಶೋಭಾ ಬೇರೊಬ್ಬರಿ 40 ಲಕ್ಷ ಮಕ್ಮಲ್ ಟೋಪಿ ಹಾಕಿದ್ದಾರೆ.

ಖಾಸಗಿ ಬ್ಯಾಂಕ್ ಒಂದರಿಂದ ಈಕೆಯ ಮನೆಯ ಮೇಲೆ ಸಾಲ ಕೊಡಿಸುವುದಾಗಿ ಶೋಭಾ ಬ್ಯಾಂಕಿಗೆ ಅರ್ಜಿ ಹಾಕಿಸಿದ್ದಾರೆ. ಆದರೆ ಗಂಗಮ್ಮ ಅವರಿಗೆ ಆ ಬ್ಯಾಂಕಿನಿಂದ ಯಾವುದೇ ಸಾಲ ಮಂಜೂರಾಗದ ಹಿನ್ನೆಲೆಯಲ್ಲಿ ಶೋಭಾ ತನ್ನ ಮನೆಯ ಮೇಲೆ ಸಾಲ ಕೊಡಿಸುವುದಾಗಿ ನಂಬಿಸಿದ್ದಾಳೆ. ಇದಕ್ಕೂ ಮುನ್ನ ಗಂಗಮ್ಮ ಅವರ ಮನೆಯನ್ನು ಸಾಲದ ಭದ್ರತೆಯ ನೆಪದಲ್ಲಿ ಗಂಗಮ್ಮ ಅವರಿಂದ ಮನೆಯ ಮಾರಾಟದ ಸಂಪೂರ್ಣ ಕರಾರು ಪತ್ರ ಬರೆಯಿಸಿಕೊಂಡಿದ್ದಾರೆ. ಆದರೆ ಕರಾರು ಪತ್ರ ಬರೆಯಿಸಿಕೊಂಡ ನಂತರ ಒಂದು ಬಿಡಿಗಾಸು ನೀಡದೇ ಶೋಭಾ ತನಗೆ ವಂಚನೆ ಮಾಡಿದ್ದಾಳೆ ಎಂದು ಗಂಗಮ್ಮ ಗಂಭೀರ ಆರೋಪ ಮಾಡಿದ್ದಾಳೆ.

ಕಳೆದ ಹಲವು ವರ್ಷಗಳಿಂದ ಚಿರಪರಿಚಿತಳಾಗಿರುವ ಶೋಭಾ ಇವರೊಂದಿಗೆ ಹಲವಾರು ವ್ಯವಹಾರ ನಡೆಸಿದ್ದಾಳೆ. ಸಾಲದೆಂಬಂತೆ ಗಂಗಮ್ಮಳ ಪರಿಚಯಸ್ಥರಿಗೂ ಬಡ್ಡಿ ಸಾಲದಂತೆ ಹಣವನ್ನು ಸಹ ಪೀಕಿದ್ದಾಳೆ. ಅದರಂತೆ ಅನೇಕರಿಗೆ ಇದೇ ರೀತಿ ಆಮಿಷಗಳನ್ನು ಒಡ್ಡಿ ಅದರಿಂದ ಲಕ್ಷ,ಲಕ್ಷ ರೂಪಾಯಿ ವಂಚನೆ ಮಾಡಿ ಹಣ ಹಿಂದಿರುಗಿಸಿ ಕೊಡಲಾರದೇ ಬೆದರಿಕೆಯನ್ನು ಹಾಕಿಸಿದ್ದಾಳಂತೆ. ಹೀಗಾಗಿ ಶೋಭಾಳಿಂದ ವಂಚನೆಗೆ ಒಳಗಾದ ಹಲವು ಮಹಿಳೆಯರು ಆರೋಪಿಸಿದ್ದಾರೆ. ಇನ್ನೂ ಈ ಕುರಿತಂತೆ ಶೋಭಾ ಮಾಡುತ್ತಿರುವ ವಂಚನೆಗೆ ಈ ಮಹಿಳೆಯರು ಪೊಲೀಸ್ ಠಾಣೆ ಹಾಗೂ ಕೋರ್ಟ್ ಮೊರೆ ಹೋಗಿದ್ದು, ತಮಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಅಂಗಲಾಚುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

04/03/2022 06:01 pm

Cinque Terre

32.54 K

Cinque Terre

2

ಸಂಬಂಧಿತ ಸುದ್ದಿ