ಕುಂದಗೋಳ : ಸ್ನಾನ ಗೃಹದ ನೀರು ಹರಿ ಬಿಡುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ನೆರೆ ಹೊರೆಯ ಕುಟುಂಬದವರಿಂದ ಹಲ್ಲೆಗೊಳಗಾಗಿ, ತಾಲೂಕ ಆಸ್ಪತ್ರೆಗೆ ದಾಖಲಾದ ಲಲಿತಾ ತಿಪ್ಪಣ್ಣ ಕರೆಮ್ಮನವರ ಆರೋಗ್ಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿಚಾರಿಸಿದರು.
ಬಳಿಕ ಹಲ್ಲೆ ನಡೆಸಿದ ವಿಡಿಯೋ ನೋಡಿ ಇಂತಹ ಘಟನೆಗಳಿಗೆ ಕಡಿವಾಣ ಹಾಕಿ, ಹಲ್ಲೆ ಮಾಡಿದವರು ಹಲ್ಲೆಗೆ ಒಳಗಾದವರಿಂದ ಪ್ರಕರಣ ದಾಖಲಾಗಿವೆ.
ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ? ಎಂದು ಸ್ಥಳೀಯ ಪೊಲೀಸರನ್ನು ಪ್ರಶ್ನಿಸಿ ಪ್ರಕರಣದ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಿ ಎಂದರು.
ಕಳೆದ ಮಾ.1 ರಂದು ಒಂಟಿ ಮಹಿಳೆಯ ಮೇಲೆ ಹಲ್ಲೆಯಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣದ ತನಿಖೆ ಹಾಗೂ ಸೂಕ್ತ ಕ್ರಮಕ್ಕೆ ಕೇಂದ್ರ ಸಚಿವರೇ ಆದೇಶ ನೀಡಿದ್ದಾರೆ.
Kshetra Samachara
04/03/2022 12:01 pm