ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಣಪುರಂನಿಂದ ಮನೆ ಸೇರಿತು 37 ಗ್ರಾಂ ಚಿನ್ನ- 24 ಗಂಟೆಯಲ್ಲಿ ಫಲಿಸಿತು ಪಬ್ಲಿಕ್ ನೆಕ್ಸ್ಟ್ ವರದಿ

ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್

ಹುಬ್ಬಳ್ಳಿ: ಸಾಲಕ್ಕಾಗಿ ಅಡವಿಟ್ಟ ಬಂಗಾರ ಕಳೆದುಕೊಂಡು ಸಂಕಷ್ಟಕ್ಕೆ ಎದುರಾಗಿದ್ದ ಮಹಿಳೆಯ ಕುಟುಂಬಕ್ಕೆ ಕೇವಲ 24 ಗಂಟೆಯಲ್ಲಿ ಬಂಗಾರವನ್ನು ಹಿಂತಿರುಗಿಸುವ ಕೆಲಸವನ್ನು ನಿಮ್ಮ ಪಬ್ಲಿಕ್‌ ನೆಕ್ಸ್ಟ್‌ ಮಾಡಿದೆ.

ಹೌದು. ಜಗದೇವಿ ಮಾಳಿ ಎಂಬ ಈ ಮಹಿಳೆ ಬಡತನದ ಕುಟುಂಬದಿಂದ ಬಂದವರು. ಕಷ್ಟಪಟ್ಟು ದುಡಿದು ಅಷ್ಟೋ ಇಷ್ಟೋ ಚಿನ್ನಾಭರಣ ಮಾಡಿಸಿಕೊಂಡಿದ್ದರು. ಮನೆಯ ಆರ್ಥಿಕ ಸಮಸ್ಯೆ ಸರಿದೂಗಿಸಲು ಮಣಪುರಂ ಗೋಲ್ಡ್ ಲೋನ್ ಕಂಪನಿಯಲ್ಲಿ ತಮ್ಮ ಬಳಿಯಿದ್ದ ಚಿನ್ನಾಭರಣ ಅಡ ಇಟ್ಟಿದ್ದ ಜಗದೇವಿ ಸಾಲ ಪಡೆದಿದ್ದರು. ಆದರೆ ಸಾಲವನ್ನು ಪಾವತಿಸಿ ಆಭರ‌ಣ ಪಡೆಯಲು ಹೋದ ಅವರಿಗೆ ಶಾಕ್ ಆಗಿತ್ತು. ಮಣಪುರಂ ಗೋಲ್ಡ್ ಲೋನ್ ಕಚೇರಿಯ ಸಿಬ್ಬಂದಿ ಆಭರಣ ವಾಪಸ್ ಕೊಡೋದಿಕ್ಕೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಅಲ್ಲಿನ ಸಿಬ್ಬಂದಿಯ ಮಾತಿನಿಂದ ಬೇಸತ್ತಿದ್ದ ಜಗದೇವಿ ಮಾಳಿ ಅವರು ಪಬ್ಲಿಕ್ ನೆಕ್ಸ್ಟ್ ಮುಂದೆ ಕಣ್ಣೀರಿಟ್ಟಿದ್ದರು. ಈ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಬಿತ್ತರಿಸಿದ ಬೆನ್ನಲ್ಲೇ ಯಾರದೋ ಕೈ ಸೇರಿದ್ದ ಬಂಗಾರ ವಾಪಸ್ ಮೂಲ ಮಾಲೀಕಳಾದ ಜಗದೇವಿ ಅವರ ಕೈ ಸೇರಿದೆ. ಸದ್ಯ ಆ ಕುಟುಂಬದವರು ಪಬ್ಲಿಕ್ ನೆಕ್ಸ್ಟ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಬೈಟ್: ಆಕಾಶ ಮಾಳಿ( ಬಂಗಾರ ಅಡವಿಟ್ಟ ಮಹಿಳೆಯ ಮಗ)

ಇನ್ನು ಲಕ್ಷಾಂತರ ಮೌಲ್ಯದ ಬಂಗಾರ ಎಲ್ಲಿ ಹೋಯಿತು? ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದ ಕುಟುಂಬ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ವರದಿ ಪ್ರಸಾರಗೊಂಡ 24 ಗಂಟೆಯಲ್ಲಿಯೇ ಬಿಗ್ ಇಂಪ್ಯಾಕ್ಟ್ ಆಗಿದೆ.

Edited By : Shivu K
Kshetra Samachara

Kshetra Samachara

25/02/2022 12:07 pm

Cinque Terre

66.61 K

Cinque Terre

19

ಸಂಬಂಧಿತ ಸುದ್ದಿ