ಹುಬ್ಬಳ್ಳಿ: ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸಕ್ಕೆ ಪ್ರವೇಶ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 8.85 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಅಸ್ಸಾಂ ರಾಜ್ಯದ ಕೋಕ್ರಾಝೂರ್ ಪೊಲೀಸ್ ಠಾಣೆಯಿಂದ ವಿಚಾರಣೆಗಾಗಿ ಹುಬ್ಬಳ್ಳಿಯ ವಿದ್ಯಾನಗರದ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.
ಅಸ್ಸಾಂ ರಾಜ್ಯದ ಸುರೇಶ ಗೋವಿಂದರಾಜ ಯೆರ್ರಮಶೆಟ್ಟಿ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಹುಬ್ಬಳ್ಳಿಯ ರೋಹಿತ್‌ಕುಮಾರ ಕಲಾಸ್ಕರ್ ಎಂಬುವರು ದೂರು ಕೊಟ್ಟಿದ್ದಾರೆ. 2017ರ ಮಾರ್ಚ್ ತಿಂಗಳಲ್ಲಿ ಥೈಲ್ಯಾಂಡ್ ವಿಶ್ವವಿದ್ಯಾನಿಲಯ ಆಧಾರಿತ ನಾಲ್ಕು ವರ್ಷಗಳ ವ್ಯಾಸಂಗಕ್ಕಾಗಿ ಯುನಿರ್ವಸಿಟಿ / ಇಂಟರನ್ಯಾಷನಲ್ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಿಸುತ್ತೇನೆಂದು ನಂಬಿಸಿ 8.85 ಲಕ್ಷ ರೂ ಹಣ ಪಡೆದು ಪ್ರವೇಶ ಕೊಡಿಸದೇ ಮೋಸ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Kshetra Samachara
25/02/2022 10:52 am