ಹುಬ್ಬಳ್ಳಿ: ಹೀಗೆ ಕಣ್ಣೀರು ಹಾಕುತ್ತಿರುವ ಈ ಮಹಿಳೆಯ ಹೆಸರು ರುಖಿಯಾ... ಸುಮಾರು ಎಂಟು ವರ್ಷಗಳ ಹಿಂದಷ್ಟೇ ರುಖಿಯಾ ಹಾಗೂ ಆನಂದನಗರದ ನಿವಾಸಿ ತೌಶಿಫ್ ಫಸ್ಕಿಯ ವಿವಾಹವಾಗಿತ್ತು. ಆದರೆ ಮೊದಲು ಒಂದೆರಡು ವರ್ಷ ಎಲ್ಲವೂ ಚನ್ನಾಗಿಯೇ ಇತ್ತು. ಇವರ ಪ್ರೀತಿಗೆ ಸಾಕ್ಷಿ ಎಂಬಂತೆ ಎರಡು ಮುದ್ದಾದ ಮಕ್ಕಳು ಹುಟ್ಟಿದ್ದವು. ಆದರೆ ಯಾವ ವಕ್ರ ದೃಷ್ಟಿ ಈ ಕುಟುಂಬದ ಮೇಲೆ ಬಿತ್ತೋ ಗೊತ್ತಿಲ್ಲ. ಸಂಸಾರ ಒಡೆದು ಚೂರಾಗಿದೆ. ಅಲ್ಲದೇ ಪತಿ ತೌಶಿಫ್ ತನ್ನ ಹೆಂಡತಿ ಮೇಲೆ ದೈಹಿಕ ಹಿಂಸೆ ನೀಡುತ್ತಿದ್ದಾನೆ. ಇದಕ್ಕೆ ಬೇಸತ್ತ ಮಹಿಳೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಲ್ಲದೇ ತನ್ನ ಒಂದು ಮಗುವನ್ನು ಗಂಡ ನನ್ನಿಂದ ದೂರ ಮಾಡಿದ್ದಾನೆ. ನನ್ನ ಮಗುವನ್ನು ನನಗೆ ಕೊಡಿಸಿ ಅಂತ ಕಣ್ಣೀರಿಟ್ಟಿದ್ದಾಳೆ.
ದಿನವೂ ಸಾಕಷ್ಟು ಕಿರುಕುಳ ಕೊಡುತ್ತಿದ್ದ ತೌಶಿಫ್ ಮನಬಂದಂತೆ ಹೊಡೆದು ಊರು ಬಿಟ್ಟಿದ್ದಾನೆ. ಅಲ್ಲದೇ ರುಖಿಯಾ ಮೇಲೆ ಹಲ್ಲೆ ಮಾಡಿದ್ದು, ಮಗಳ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇವೆ ಎಂದು ಮಹಿಳೆಯ ಕುಟುಂಬದವರು ತೌಶಿಫ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಅಲ್ಲದೇ ನಮ್ಮ ಮಗಳಿಗೆ ನ್ಯಾಯ ಕೊಡಿಸಿ ಎಂದು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ. ಅಲ್ಲದೇ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ನಮ್ಮ ಅಳಿಯ ಈ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ ತುಂಬಿದ ಕುಟುಂಬದಲ್ಲಿ ಒಡಕು ಬಂದಿದ್ದು ಮಾತ್ರ ಮತ್ತೊಂದು ಹೆಣ್ಣಿನ ಎಂಟ್ರಿ ಇಂದ ಎಂಬುವುದು ಕುಟುಂಬದವರ ಮಾತು. ಅದು ಏನೇ ಇರಲಿ ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡು ಕುಟುಂಬವನ್ನು ಒಂದು ಮಾಡಬೇಕು ಎಂಬುವುದು ಸಂಬಂಧಿಕರ ಆಶಯ.
Kshetra Samachara
23/02/2022 01:11 pm