ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಯಾರದೋ ಬಂಗಾರ ಇನ್ನಾರದೋ ಕೈಗೆ: ಮಣಪುರಂನಲ್ಲಿ ಗೋಲ್ಡ್ ಟ್ರಾನ್ಸಫರ್ ದಂಧೆ

ಹುಬ್ಬಳ್ಳಿ: ಹೀಗೆ ಮಣಿಪುರಂ ಗೋಲ್ಡ್ ಲೋನ್ ಕಚೇರಿಯ ಸಿಬ್ಬಂದಿಯ ಜೊತೆಗೆ ಮಾತಿನ ಚಕಮಕಿ ನಡೆಸುತ್ತಿರುವ ಇವರು ಸುಮಾರು ದಿನಗಳ ಹಿಂದೆಯಷ್ಟೇ 37 ಗ್ರಾಂ ಬಂಗಾರವನ್ನು ಇಟ್ಟು ಸಾಲ ಪಡೆದಿದ್ದರು. ಪ್ರತಿ ತಿಂಗಳು ಸಾಲದ ಕಂತನ್ನು ಪಾವತಿ ಮಾಡುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಕೆಲಸದ ನಿಮಿತ್ತ ಸೊಲ್ಲಾಪುರ ಹೋಗಿದ್ದ ಈ ಕುಟುಂಬ ಬಡ್ಡಿ ಹಾಗೂ ಸಾಲದ ಪಾವತಿ ಮಾಡಿರಲಿಲ್ಲ. ಈಗ ಹಳೆಯ ಸಾಲವನ್ನು ವಜಾ ಮಾಡಿ ಬಂಗಾರ ಪಡೆಯಲು ಬಂದರೇ ನಿಮ್ಮ ಬಂಗಾರ ಈಗಾಗಲೇ ಯಾರೋ ಬಿಡಿಸಿಕೊಂಡು ಹೋಗಿದ್ದಾರೆ ಎಂದು ಸಿಬ್ಬಂದಿ ಈ ಕುಟುಂಬಕ್ಕೆ ಶಾಕ್ ಕೊಟ್ಟಿದ್ದಾರೆ. ಇವರ ಹೆಸರಿನಲ್ಲಿ ಇದ್ದ ಬಂಗಾರವನ್ನು ಯಾರಿಗೂ ಅಪರಿಚಿತರಿಗೆ ಬಂಗಾರವನ್ನು ಕೊಟ್ಟಿದ್ದು, ಬಡ ಕುಟುಂಬಕ್ಕೆ ಭರ ಸಿಡಿಲು ಬಡೆದಂತಾಗಿದೆ. ಯಾರದೋ ಬಂಗಾರವನ್ನು ಯಾರಿಗೊ ಕೊಟ್ಟಿರುವ ಸಿಬ್ಬಂದಿಯ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಯಾರದೋ ಬಂಗಾರವನ್ನು ಯಾರಿಗೋ ಕೊಟ್ಟಿರುವ ಸಿಬ್ಬಂದಿ ನಡೆಗೆ ಕುಟುಂಬಸ್ಥರು ಅಸಮಾಧಾನ ಹೊರಹಾಕಿದ್ದು, ಮಾತ್ರವಲ್ಲದೆ ನಮ್ಮ ಬಾಂಡ್ ನಮ್ಮ ಹತ್ತಿರ ಇದ್ದರೂ ಅದು ಹೇಗೆ ನಮ್ಮ ಬಂಗಾರವನ್ನು ಬೇರೆಯವರಿಗೆ ಹಸ್ತಾಂತರ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಈ ಕುರಿತು ಸಿಬ್ಬಂದಿ ವಿಚಾರಿಸಿದಾಗ ಈ ಹಿಂದೆ ಇದ್ದ ಮ್ಯಾನೇಜರ್ ಅವರ ಅಧಿಕಾರ ಅವಧಿಯಲ್ಲಿ ಆಗಿದ್ದು, ಇದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಎಂದು ಕೈ ಚೆಲ್ಲುತ್ತಿದ್ದಾರೆ. ಅಲ್ಲದೇ ನಮ್ಮ ಬಂಗಾರ ನಮಗೆ ಬೇಕು ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ಒಟ್ಟಿನಲ್ಲಿ ಜಾಹೀರಾತು ನೋಡಿ ಮನೆಯಲ್ಲಿ ಇದ್ದ ಬಂಗಾರವನ್ನು ಅಡವಿಟ್ಟ ಕುಟುಂಬದವರು ಈಗ ಕಣ್ಣೀರು ಹಾಕುವಂತಾಗಿದೆ. ಕೂಡಲೇ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಈ ಬಗ್ಗೆ ತನಿಖೆ ನಡೆಸಿ ಕುಟುಂಬಸ್ಥರ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಬೇಕಿದೆ.

Edited By : Shivu K
Kshetra Samachara

Kshetra Samachara

23/02/2022 12:14 pm

Cinque Terre

39.23 K

Cinque Terre

11

ಸಂಬಂಧಿತ ಸುದ್ದಿ