ಹುಬ್ಬಳ್ಳಿ: ಬಂಗಾರದ ಅಂಗಡಿಯ ಕೆಲಸಕ್ಕಿದ್ದ ಸಿಬ್ಬಂದಿ ಬರೋಬ್ಬರಿ 5.50 ಲಕ್ಷ ರೂ. ಮೌಲ್ಯದ 108 ಗ್ರಾಂ ಬಂಗಾರ ದೂಚಿಕೊಂಡು ಎಸ್ಕೇಪ್ ಆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮೀರಾಜುಲ್ ಮಂಡಲ ಚಿನ್ನ ಕಳೆದುಕೊಂಡ ಬಂಗಾರದ ಅಂಗಡಿಯ ಮಾಲೀಕರು. ಮೀರಾಜುಲ್ ಅವರು ನಗರದ ಬಂಡಿವಾಡ ಬೇಸ್ ಹತ್ತಿರದ ಗೌಳಿಗಲ್ಲಿ ಶಾಹ್ ಬಜಾರ್‌ನಲ್ಲಿ ಬಂಗಾರ ವ್ಯಾಪಾರ ಮಾಡುತ್ತಿದ್ದರು. ಇವರೊಂದಿಗೆ ರತನ್ ಮಾಜಿ ಮತ್ತು ನಾಸೀರ್ ಮಲ್ಲಿಕ್ ಎಂಬುವರು ಸಹ ಕೆಲಸ ಮಾಡುತ್ತಿದ್ದರು. ಮೀರಾಜುಲ್ ಗಟ್ಟಿ ಬಂಗಾರ ನೀಡಿದರೆ ಇವರಿಬ್ಬರು ಆಭರಣಗಳನ್ನು ಮಾಡಿ ಕೊಡುತ್ತಿದ್ದರು ಎನ್ನಲಾಗಿದೆ.
ಮೀರಾಜುಲ್ ಅವರು ನಕ್ಲೆಸ್ ಮಾಡಲು ರತನ್‌ಗೆ 55 ಗ್ರಾಂ ಗಟ್ಟಿ ಬಂಗಾರ ಮತ್ತು ಉಂಗುರ, ಕಿವಿಯ ಒಲೆ ಮಾಡಲು ನಾಶೀರ್‌ಗೆ 53 ಗ್ರಾಂ ಬಂಗಾರ ನೀಡಿದ್ದರು. ಆದರೆ ಭಾನುವಾರ ಇಬ್ಬರೂ ಬಂಗಾರ ಸಮೇತ ಪರಾರಿಯಾಗಿದ್ದಾರೆ. ಈ ಕುರಿತು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
22/02/2022 09:20 am