ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆಕ್‌ ಬೌನ್ಸ್ ಪ್ರಕರಣಕ್ಕೆ ಸ್ಪಷ್ಟೀಕರಣ ಕೊಟ್ಟ ಕರಡೋಣಿ

ಧಾರವಾಡ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಸ್ವಯಂ ಉದ್ಯೋಗಿಯಾಗಿದ್ದ ವ್ಯಕ್ತಿಯೊಬ್ಬರಿಗೆ ಪರಿಚಯದ ಮತ್ತೊಬ್ಬ ವ್ಯಕ್ತಿಯಿಂದ 1 ಲಕ್ಷ 99 ಸಾವಿರ ರೂಪಾಯಿ ಕೈಗಡ ಸಾಲವಾಗಿ ಕೊಡಿಸಿದ್ದ ವೇಳೆ, ನಿರುದ್ಯೋಗಿಯೊಬ್ಬರಿಗೆ ಸಹಾಯ ಮಾಡುವ ಉದ್ದೇಶದಿಂದ ನೀಡಿದ್ದ ಚೆಕ್‌ನ್ನು ಪ್ರಕರಣಕ್ಕೆ ಸಂಬಂಧವಿಲ್ಲದ 3 ನೇ ವ್ಯಕ್ತಿಯೊಬ್ಬರು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ವ್ಯವಹಾರದಲ್ಲಿ ಭಾಗಿಯೇ ಇಲ್ಲದ ವ್ಯಕ್ತಿ ಸತ್ಯಕ್ಕೆ ದೂರವಾಗಿ ಚೆಕ್ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ಕಲಾ ಕಾಲೇಜು ಪ್ರಾಚಾರ್ಯ ಡಾ.ಡಿ.ಬಿ. ಕರಡೋಣಿ ತಮ್ಮ ವಿರುದ್ಧದ ದೂರಿಗೆ ಸ್ಪಷ್ಟೀಕರಣ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಗೋಕಾಕ ಮೂಲದ ವಿಠ್ಠಲ ಸಿದ್ಧಪ್ಪ ಮಾಳಗಿ ಎಂಬುವವರೊಂದಿಗೆ ಯಾವುದೇ ವ್ಯವಹಾರ ಮಾಡಿಲ್ಲ. ಅವರ ಪರಿಚಯವೂ ನನಗಿಲ್ಲ. 2020 ರಲ್ಲಿ ಕೈಗಡ ಸಾಲವಾಗಿ ಅವರಿಂದ 3 ಲಕ್ಷ ರೂಪಾಯಿ ಸಾಲ ಪಡೆದಿದ್ದೆ ಎಂಬ ಆರೋಪ ಸಂಪೂರ್ಣ ಸುಳ್ಳಾಗಿದೆ.

ಪ್ರಕರಣವು ಗೋಕಾಕ ಸಿವಿಲ್ ನ್ಯಾಯಾಲಯದಲ್ಲಿದೆ. ಫೆ. 9 ರಂದು ಅನಾರೋಗ್ಯದ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಫೆ. 10 ರಂದು ನ್ಯಾಯಾಲಯ, ಎನ್‌ಬಿಡಬ್ಲು ಜಾರಿ ಮಾಡಿತ್ತು. ಅದರಂತೆ ಫೆ.14 ರಂದು ನಾನು ಸ್ವತಃ ನ್ಯಾಯಾಲಯದ ಎದುರು ಹಾಜರಾಗಿ ವಕೀಲರ ಮೂಲಕ ಸಲ್ಲಿಸಿದ ಕೋರಿಕೆ ಪರಿಗಣಿಸಿ, ಘನ ನ್ಯಾಯಾಲಯ, ವಿಚಾರಣೆಯ ಮರು ಕರೆಗೆ ಅನುಮತಿ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

18/02/2022 10:21 pm

Cinque Terre

28.6 K

Cinque Terre

0

ಸಂಬಂಧಿತ ಸುದ್ದಿ