ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಜಾತಿ ನಿಂದನೆ ಕಾನೂನಿಗೆ ಬದಲಾವಣೆ ಅವಶ್ಯ: ಗುರುರಾಜ್ ಹುಣಸಿಮರದ

ಕಲಘಟಗಿ: ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಜಾತಿ ನಿಂದನೆ ಕಾನೂನನ್ನು ತಮ್ಮ ವಯಕ್ತಿಕ ಹಿತಾಸಕ್ತಿಗೆ ಬಳಸಿಕೊಂಡು ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತರುವುದರಿಂದ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಗಳ ತೇಜೋವಧೆ ಆಗುತ್ತಿದ್ದು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈ ಕಾನೂನಿಗೆ ಬದಲಾವಣೆ ತರಬೇಕೆಂದು ವೀರಶೈವ ಸಮಾಜದ ಗುರುರಾಜ್ ಹುಣಸಿಮರದ ಆಗ್ರಹಿಸಿದರು.

ಪಟ್ಟಣದ ಹೊರವಲಯದಲ್ಲಿರುವ ಹನ್ನರಡು ಮಠದಲ್ಲಿ ಎಲ್ಲಾ ಸಮಾಜದ ಮುಖಂಡರ ಸಭೆ ಕರೆದು ಮಾತನಾಡುತ್ತ, ಈ ತರಹದ ಕಾನೂನನ್ನು ಕೆಲವೊಂದು ವ್ಯಕ್ತಿಗಳು ದುರುಪಯೋಗ ಪಡೆಯಿಸಿ ಕೋಳ್ಳುತ್ತಿರೋದು ಖಂಡನಿಯ ಎಂದು ಹೇಳಿದ್ದಾರೆ.

ಫೆಬ್ರವರಿ 18 ರಂದು ಧಾರವಾಡದಲ್ಲಿ ಕಲಾಭವನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು. ಈ ಹೋರಾಟಕ್ಕೆ ಎಲ್ಲಾ ಸಮಾಜ ಬಾಂಧವರೂ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ವೈ.ಬಿ. ಪಾಟೀಲ್ ಶಂಕ್ರಣ್ಣ ಅಂಗಡಿ ಸಿಬಿ ಹೊನ್ನಿಹಳ್ಳಿ ಜಿಎಂ ಗಾಳಿ ಬಸವರಾಜ್ ಹೊನ್ನಳ್ಳಿ ಇದ್ದರು.

Edited By : Shivu K
Kshetra Samachara

Kshetra Samachara

16/02/2022 10:08 pm

Cinque Terre

30 K

Cinque Terre

2

ಸಂಬಂಧಿತ ಸುದ್ದಿ