ಹುಬ್ಬಳ್ಳಿ: ವಿಜಯಪುರ- ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 2,29,500 ರೂ. ಮೌಲ್ಯದ 38 ಗ್ರಾಂ ಚಿನ್ನಾಭರಣ, ಒಂದು ಮೊಬೈಲ್, 5 ಸಾವಿರ ರೂ.ನಗದು ಕಳ್ಳತನ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.
ಹುಮನಾಬಾದ್ ತಾಲೂಕು ಘಾಟಿಬೋರಾಳ ಗ್ರಾಮದ ಲಕ್ಷ್ಮೀಗೌಡ ಎಂಬುವರು ಕುಟುಂಬ ಸಮೇತರಾಗಿ ರಾತ್ರಿ ಹುಬ್ಬಳ್ಳಿಯಿಂದ ಸುಬ್ರಮಣ್ಯಂ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಚಿನ್ನಾಭರಣ ಹಾಗೂ ನಗದು ಹಣವನ್ನು ವ್ಯಾನಿಟಿ ಬ್ಯಾಗಿನಲ್ಲಿಟ್ಟಿದ್ದರು. ಇದನ್ನು ಗಮನಿಸಿದ ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
16/02/2022 09:21 am