ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ರೆಡಿಟ್ ಕಾರ್ಡ್ ಖರೀದಿ ಮಿತಿ ಹೆಚ್ಚಳ ನೆಪದಲ್ಲಿ 3.64 ಲಕ್ಷ ರೂ. ವಂಚನೆ

ಹುಬ್ಬಳ್ಳಿ: ಅಪರಿಚಿತನೊಬ್ಬ ನಿಮ್ಮ ಕ್ರೆಡಿಟ್ ಕಾರ್ಡ್‌ನ ಖರೀದಿ ಮಿತಿ ಹೆಚ್ಚಿಸುತ್ತೇನೆಂದು ನಂಬಿಸಿ, ನಗರದ ಸೇಲ್ಸ್‌ಮನ್ ವೊಬ್ಬರಿಂದ ವಿವರ ಪಡೆದು ಅವರ ಖಾತೆಯಿಂದ 3,64,840 ರೂ. ವರ್ಗಾಯಿಸಿಕೊಂಡು ವಂಚಿಸಿದ ಘಟನೆ ವಾಣಿಜ್ಯ ನಗರಿಯಲ್ಲಿ ನಡೆದಿದೆ.

ಗೋಕುಲ ರಸ್ತೆ ಅಕ್ಷಯ ಕಾಲೋನಿಯಲ್ಲಿ ನಿವಾಸಿ ಸೀತಾರಾಮ ಮೋಸ ಹೋಗಿದ್ದವರು. ಇವರಿಗೆ ಬುಧವಾರ ಅಪರಿಚಿತನೊಬ್ಬ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಕಂಪನಿಯವನೆಂದು ಪರಿಚಯಿಸಿಕೊಂಡು ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುತ್ತೇನೆಂದು ನಂಬಿಸಿದ್ದಾನೆ. ನಂತರ ಕ್ರೆಡಿಟ್ ಕಾರ್ಡ್ ಸಂಖ್ಯೆ , ಒಟಿಪಿ ಇನ್ನಿತರೆ ಮಾಹಿತಿ ಪಡೆದು ಹಂತ ಹಂತವಾಗಿ ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಕೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

14/02/2022 10:03 am

Cinque Terre

21.41 K

Cinque Terre

2

ಸಂಬಂಧಿತ ಸುದ್ದಿ