ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾಲಕ್ಕೆ ನೊಂದು ಯುವ ರೈತ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ: ಯುವ ರೈತನೋರ್ವ ಸಾಲವನ್ನು ತೀರಿಸುವ ದಾರಿ ಕಾಣದೆ ಮನೆಯಲ್ಲಿದ್ದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ನಡೆದಿದೆ.

ಮೊರಬ ಗ್ರಾಮದ ಶ್ರೀನಿವಾಸ ರೆಡ್ಡಿ ಮಾಸ್ತಿ ಆತ್ಮಹತ್ಯೆಗೆ ಶರಣಾದ ರೈತ. ಶ್ರೀನಿವಾಸ ಖಾಸಗಿ ಬ್ಯಾಂಕ್‌ನಲ್ಲಿ 14 ಲಕ್ಷ ರೂ. ಸಾಲವನ್ನು ಮಾಡಿದ್ದರು. ತನ್ನ ತಂದೆಯ ಹೆಸರಿನಲ್ಲಿ ಕೂಡ 50 ಸಾವಿರ ರೂ. ಬೆಳೆ ಸಾಲವನ್ನು ಪಡೆದಿದ್ದರು. ಆದರೆ ಈ ಸಾಲವನ್ನು ತೀರಿಸಲಾಗದೆ ಮಾನಸಿಕವಾಗಿ ನೊಂದುಕೊಂಡು ಮನೆಯಲ್ಲಿದ್ದ ಉಣ್ಣೆ ಪುಡಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

05/02/2022 02:00 pm

Cinque Terre

14.03 K

Cinque Terre

0

ಸಂಬಂಧಿತ ಸುದ್ದಿ