ಹುಬ್ಬಳ್ಳಿ: ಹಿಂಬದಿಯ ಗೋಡೆ ಒಡೆದು ಫಾರ್ಮ್ದಲ್ಲಿದ್ದ ಸುಮಾರು 56 ಬಿಳಿ ಹಂದಿಗಳನ್ನು ಕಳುವು ಮಾಡಿ ಪರಾರಿಯಾದ ಘಟನೆ ಹಳೇ ಹುಬ್ಬಳ್ಳಿಯ ಗುಡಿಹಾಳ ರಸ್ತೆಯಲ್ಲಿ ಫಿಗು ಫಾರ್ಮ್ ದಲ್ಲಿ ಬೆಳಕಿಗೆ ಬಂದಿದೆ.
ಕಳ್ಳರು ಫಾರ್ಮ್ನ 93 ರೂಮ್ಗಳಲ್ಲಿದ್ದ ಅಂದಾಜು 2.24 ಲಕ್ಷ ರೂ . ಮೌಲ್ಯದ 56 ಬಿಳಿ ಹಂದಿಗಳನ್ನು ಕಳುವು ಮಾಡಿದ್ದಾರೆ. ಕಳ್ಳರು ಜ. 24 ರ ತಡರಾತ್ರಿ ಹಂದಿಗಳನ್ನು ಕಳ್ಳತನ ಮಾಡಿದ್ದಾಗಿ ಫಾರ್ಮ್ನ ಮಾಲಿಕ , ದೇಶಪಾಂಡೆ ನಗರದ ಐಬಿ ರಸ್ತೆಯ ಜೆರಸನ್ ಪೆರೇರಾ ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Kshetra Samachara
03/02/2022 01:31 pm