ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸ್ತಿಗಾಗಿ ಜಗಳ, ಚಾಕು ಇರಿತ : ದೂರು, ಪ್ರತಿ ದೂರು ದಾಖಲು

ಹುಬ್ಬಳ್ಳಿ : ಆಸ್ತಿ ವಿಚಾರವಾಗಿ ಜಗಳ ತೆಗೆದು ಯುವಕನೊಬ್ಬನ ತಲೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಕೌಲಪೇಟೆ ಮಸೀದಿ ಬಳಿ ಭಾನುವಾರ ರಾತ್ರಿ ನಡೆದಿದೆ.

ಕೌಲಪೇಟೆ ನಿವಾಸಿ ಅಬ್ದುಲ್ ರೀಂ ಮುಚ್ಚಾಲೆ ಹಲ್ಲೆಗೀಡಾದವ. ಜಾಹೀದ್ ಅತ್ತಾರ, ಖಾಲಿದ್ ಅತ್ತಾರ, ವಾಹೀದ್ ಅತ್ತಾರ ಹಾಗೂ ಮಹಮ್ಮದ್ ಯೂಸೂಫ್ ಮುಚ್ಚಾಲೆ ವಿರುದ್ಧ ಕಮರಿಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನ್ನ ತಂದೆ ಮಹಮ್ಮದ್ ಇಸ್ಮಾಯಿಲ್ ಮುಚ್ಚಾಲೆ ಜತೆಗೆ ಆಸ್ತಿ ವಿಚಾರಕ್ಕೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ ನನ್ನ ತಲೆಗೆ ಚಾಕುವಿನಿಂದ ಚುಚ್ಚಿ, ಜೀವ ಬೆದರಿಕೆ ಹಾಕಿದ್ದಾರೆ. ನಮ್ಮ ಚೀರಾಟ ಕೇಳಿ ಅಕ್ಕಪಕ್ಕದವರು ಬಂದು ಜಗಳ ಬಿಡಿಸಿದ್ದಾರೆ ಎಂದು ಅಬ್ದುಲ್ ಕರೀಂ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿದೂರು ದಾಖಲು: ನಮ್ಮ ಮಾವ ಮಹಮ್ಮದ್ ಇಸ್ಮಾಯಿಲ್ ಮುಚ್ಚಾಲೆ ಹಾಗೂ ಅವರ ಮಗ ಅಬ್ದುಲ್ ಕರೀಂ ಮುಚ್ಚಾಲೆ ಭಾನುವಾರ ರಾತ್ರಿ ನಮ್ಮೊಂದಿಗೆ ಜಗಳ ತೆಗೆದಿದ್ದರು. ಈ ವೇಳೆ ಅಬ್ದುಲ್ಕರೀಂ ನನ್ನ ಎಡಗೈಗೆ ಚಾಕುವಿನಿಂದ ಇರಿದು ಗಾಯಪಡಿಸಿದ್ದಾನೆ ಎಂದು ವಾಹೀದ ಅತ್ತಾರ ಪ್ರತಿದೂರು ದಾಖಲಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

01/02/2022 09:27 am

Cinque Terre

22.12 K

Cinque Terre

0

ಸಂಬಂಧಿತ ಸುದ್ದಿ