ಹುಬ್ಬಳ್ಳಿ: ಬ್ಯಾಂಕಿನ ಖಾತೆ ಬ್ಲಾಕ್ ಆಗಿವೆ ಎಂದು ಮೊಬೈಲ್‌ಗೆ ಸಂದೇಶ ಕಳುಹಿಸಿ ಮಹಿಳೆಯೊಬ್ಬರಿಗೆ 7.65 ಲಕ್ಷ ರೂ.ವಂಚನೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹೌದು. ಹುಬ್ಬಳ್ಳಿಯ ನಿವಾಸಿ ಎ.ಎಸ್.ಬಂಡಿ ಎಂಬುವರಿಗೆ ಅಪರಿಚಿತ ವ್ಯಕ್ತಿ ಮೋಸ ಮಾಡಿದ್ದಾನೆ. ತಮ್ಮ ಬ್ಯಾಂಕಿನ ಖಾತೆ ಬಂದ್ ಆಗುತ್ತದೆ ಎಂಬ ಭಯದಿಂದ ಸಂದೇಶ ಬಂದ ನಂಬರಿಗೆ ಎ.ಎಸ್. ಬಂಡಿ ಸಂಪರ್ಕಿಸಿದ್ದಾರೆ. ಆಗ ಅಪರಿಚಿತರು ತಾವು ಬ್ಯಾಂಕ್ ನೌಕರನೆಂದು ನಂಬಿಸಿ ಬ್ಯಾಂಕಿನ ವಿವಿಧ ಮಾಹಿತಿ ಪಡೆದು ಮಹಿಳೆಯ ಖಾತೆಯನ್ನು ತಮ್ಮ ಮೊಬೈಲ್ ನಂಬರ್‌ಗೆ ಕನೆಕ್ಟ್ ಮಾಡಿಕೊಂಡು ಹಂತ ಹಂತವಾಗಿ ಒಟ್ಟು 7.65 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
29/01/2022 01:53 pm