ಗದಗ:ಪುರಾತನ ದೇವಸ್ಥಾನದ ಈಶ್ವರಲಿಂಗುವನ್ನೆ ಕಳ್ಳರು ಕದ್ದೊಯ್ದ ಘಟನೆ ಗಜೇಂದ್ರಗಡದ ಎಪಿಎಂಸಿ ಪುರಾತನ ದೇವಾಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದ ಕೀಲಿ ಒಡೆದು ಈಶ್ವರಪೀಠದ ಮೇಲೆ ಇದ್ದ ಈಶ್ವರಲಿಂಗುವನ್ನ ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ನಿಧಿ ಆಸೆಗಾಗಿಯೇ ಈಶ್ವಲಿಂಗುವನ್ನ ಕದಿಯಲಾಗಿದೆ ಅಂತಲೇ ಶಂಕಿಸಲಾಗಿದೆ. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.
Kshetra Samachara
28/01/2022 12:00 pm