ಹುಬ್ಬಳ್ಳಿ: ಮಕ್ಕಳು ಕಾಲೇಜಿಗೆ ಹೋಗಿ ಉತ್ತಮ ಶಿಕ್ಷಣ ಪಡೆಯಲಿ ಅಂತ ಪೋಷಕರು ಕಳುಹಿಸುತ್ತಾರೆ. ಆದರೆ ಕೆಲ ಮಕ್ಕಳು ಮಾತ್ರ ಮಾಡಬಾರದ್ದನ್ನು ಸಾರ್ವಜನಿಕರ ಮುಂದೆಯೇ ಮಾಡುತ್ತಾ ಅಸಹಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ.
ಅಂತಹ ಘಟನೆಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನ. ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ಯುವ ಪ್ರೇಮಿಗಳಿಬ್ಬರು ಮುತ್ತಿನ ಗಮ್ಮತ್ತಿನಲ್ಲಿ ತಮ್ಮನ್ನೇ ತಾವು ಮರೆತಿದ್ದಾರೆ.
ಇನ್ನು ಅಲ್ಲೇ ಇದ್ದ ಸಾರ್ವಜನಿಕರಿಗೆ ಈ ಯುವ ಜೋಡಿಯ ಅಸಭ್ಯ ವರ್ತನೆ ಇಂದ ಮುಜುಗುರ ಉಂಟಾಗಿದೆ. ಈ ರೀತಿಯಾಗಿ ಹಾಡು ಹಗಲೇ ಸಾರ್ವಜನಿಕ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಕೂಡ, ಪಾಲಿಕೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ತಮ್ಮನ್ನು ತಾವೇ ಕೇಳುವಂತಾಗಿದೆ.
Kshetra Samachara
26/01/2022 08:59 am