ಹುಬ್ಬಳ್ಳಿ: ಆನ್‌ಲೈನ್ ಜಾಹೀರಾತು ನೋಡಿ ಮನೆ ಬಾಡಿಗೆಗೆ ಪಡೆಯುವುದಾಗಿ ಕರೆ ಮಾಡಿದ್ದ ಅಪರಿಚಿತನೊಬ್ಬ, ಮುಂಗಡ ಹಣ ಪಾವತಿಸುವ ನೆಪದಲ್ಲಿ ವ್ಯಕ್ತಿಯೊಬ್ಬರ ಖಾತೆಯಿಂದ 1,20,000 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ರಾಜ್ ನಗರ ರೆವಿನ್ಯೂ ಕಾಲನಿ ನಿವಾಸಿ ಉದಯ ದೇಶಪಾಂಡೆ ವಂಚನೆಡಾದವರು, ಮನೆ ಬಾಡಿಗೆ ನೀಡುವುದಾಗಿ ಉದಯ ಅವರು ಮ್ಯಾಜಿಕ್, ಭಿಕ್ಸ್ ಡಾಟ್ ಕಾಂನಲ್ಲಿ ಜಾಹೀರಾತು ಹಾಕಿದ್ದರು. ಇದನ್ನು ನೋಡಿದ ವಂಚಕ ಕರೆ ಮಾಡಿ ಮುಂಗಡ ಹಣ ಪಾವತಿಸುವುದಾಗಿ ನಂಬಿಸಿ ಬ್ಯಾಂಕ್ ಖಾತೆ ನಂಬರ, ಐಎಫ್ಎಸ್ ಸಿ ಕೋಡ್ ಪಡೆದುಕೊಂಡು 1,20,000 ವಂಚನೆ ಮಾಡಿರುವ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
17/01/2022 11:46 am