ಧಾರವಾಡ: ಇತ್ತೀಚೆಗೆ ಧಾರವಾಡದ ಶ್ರೀನಗರ, ಸಿಲ್ವರ ಆರ್ಚಡ್ ಹಾಗೂ ಸೈದಾಪುರಗಳಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಪತ್ತೆ ಮಾಡುವಲ್ಲಿ ಧಾರವಾಡ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂದ್ರಪ್ರದೇಶ ಮೂಲದ ಸಾಹಿಲ್ ಅಲಿಯಾಸ್ ಹುಜ್ಜುಅಲಿ ಜಾಫರಿ ಹಾಗೂ ಇನ್ನೋರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ವಾಯುವಿಹಾರಕ್ಕೆಂದು ಹೋಗುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಇವರು ದೋಚುತ್ತಿದ್ದರು. ಇದಲ್ಲದೇ ಬೈಕ್‌ಗಳನ್ನೂ ಇವರು ದೋಚುತ್ತಿದ್ದರು ಎಂಬುದು ಬಂಧನದ ನಂತರ ಗೊತ್ತಾಗಿದೆ.
ಬಂಧಿತ ಈ ವ್ಯಕ್ತಿಗಳಿಂದ 4,52,500 ಮೌಲ್ಯದ 140 ಗ್ರಾಂ ಚಿನ್ನಾಭರಣ ಹಾಗೂ 1,42,000 ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಾಗಿದೆ. ಧಾರವಾಡದ ವಿವಿಧೆಡೆಗಳಲ್ಲಿ ನಡೆದಿದ್ದ ನಾಲ್ಕು ಸರಗಳ್ಳತನದಲ್ಲಿ ಇವರು ಭಾಗಿಯಾಗಿದ್ದರು.
ಎಸಿಪಿ ಅನುಶಾ ಮಾರ್ಗದರ್ಶನದಲ್ಲಿ ಉಪನಗರ ಠಾಣೆ ಇನ್‌ಸ್ಪೆಕ್ಟರ್ ರಮೇಶ ಹೂಗಾರ, ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಅಲ್ತಾಫ್ ಮುಲ್ಲಾ, ಶಹರ ಠಾಣೆ ಇನ್‌ಸ್ಪೆಕ್ಟರ್ ಸಂಗಮೇಶ ದಿಡಿಗನಾಳ, ಪಿಎಸ್‌ಐ ಶ್ರೀಮಂತ ಪಾಟೀಲ ಸೇರಿದಂತೆ ಇತರ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Kshetra Samachara
12/01/2022 09:03 am