ಹುಬ್ಬಳ್ಳಿ: ಆಕೆ ವಿದ್ಯಾರ್ಥಿನಿಯ ಸೋಗಿನಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಳು. ಮಕ್ಕಳು ಕುಡಿಯುವ ಸೆರಲ್ಯಾಕ್ ಡಬ್ಬಿಯಲ್ಲಿಯೇ ಕೈ ಚಳಕ ತೋರಿ ಮನುಕುಲಕ್ಕೆ ಮಾರಕವಾಗಲು ಹೊರಟಿದ್ದ ಆಕೆ ಈಗ ಜೈಲು ಸೇರಿದ್ದಾಳೆ. ಹಾಗಿದ್ದರೇ ಯಾರು ಚಾಲಕಿ ಹೆಣ್ಣು ಅಂತೀರಾ ತೋರಸ್ತೀವಿ ನೋಡಿ..
ಉಗಾಂಡ ಮೂಲದ ಮಹಿಳೆಯು ಸೆರಲ್ಯಾಕ್ ಡಬ್ಬಿಯಲ್ಲಿ ಒಂದೂವರೆ ಕೋಟಿ ರೂ. ಮೌಲ್ಯದ 995 ಗ್ರಾಂ 'ಮೆಥ್ ಅಪಟಮೈನ್' ಡ್ರಗ್ ಇಟ್ಟುಕೊಂಡು ರೈಲಿನ ಮೂಲಕ ಸಾಗಣೆ ಮಾಡುತ್ತಿದ್ದಳು. ಈಕೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳಿಂದ ಹುಬ್ಬಳ್ಳಿಯಲ್ಲಿ ಕಳೆದ ಶುಕ್ರವಾರ ಬಂಧಿಸಲ್ಪಟ್ಟಳು, ಪೊಲೀಸರ ಕಣ್ಣು ತಪ್ಪಿಸಲು ಈಕೆ ವಿದ್ಯಾರ್ಥಿನಿ ಸೋಗಿನಲ್ಲಿ ದೆಹಲಿಗೆ ಬಂದಿದ್ದಳು. ದೆಹಲಿಯಲ್ಲಿರುವ ಉಗಾಂಡ ಮೂಲದ ವ್ಯಕ್ತಿಯೊಬ್ಬನ ಮೂಲಕ ಬೆಂಗಳೂರಿಗೆ ಡ್ರಗ್ ಸಾಗಿಸಲು ಮುಂದಾಗಿದ್ದಳು ಎಂದು ತನಿಖೆ ವೇಳೆ ಗೊತ್ತಾಗಿದೆ.
ಹೌದು.. ಉಗಾಂಡದ ನಗೈ ಅಗ್ನೆಸ್ (30) ವಿದ್ಯಾರ್ಥಿನಿ ವಿಸಾ ಪಡೆದು 9 ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದಾಳೆ. 2024ರವರೆಗೆ ಈಕೆಯ ಅನುಮತಿ ಹೊಂದಿದೆ. ದೆಹಲಿಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುವ ನೆಪದಲ್ಲಿ ಬಂದಿದ್ದಾಳೆ. ದೆಹಲಿಯಲ್ಲಿರುವ ಉಗಾಂಡ ಮೂಲದ ಅದನ್ ಎಂಬ ವ್ಯಕ್ತಿ ಬೆಂಗಳೂರಿಗೆ ಡ್ರಗ್ ಸಾಗಣೆ ಮಾಡಲು ಸೂಚಿಸಿದ್ದ. ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಡ್ರಗ್ ಸಾಗಣಿಗೆ ವ್ಯವಸ್ಥೆ ಮಾಡಿದ್ದ. ಅದಕ್ಕಾಗಿ ಆಕೆಯನ್ನು ಮಾನಸಿಕವಾಗಿ ಸಜ್ಜುಗೊಳಿಸಿದ್ದು ಸೆರಲ್ಯಾಕ್ ಯಾರಿಗೂ ಅನುಮಾನ ಬಾರದಂತೆ ಸಾಗಿಸುವಂತೆ ಸೂಚಿಸಿದ್ದ. ಬೆಂಗಳೂರು ರೈಲು ನಿಲ್ದಾಣದಲ್ಲಿ ತನ್ನ ಸಹಚರನೊಬ್ಬ ಬಂದು ನಿನ್ನನ್ನು ಪಿಕ್ ಅಪ್ ಮಾಡುತ್ತಾನೆಂದು ತಿಳಿಸಿ ರೈಲು ಹತ್ತಿಸಿದ್ದ. ಒಂದೂವರೆ ಕೋಟಿ ರೂ.ಮೌಲ್ಯದ ಡಗ್ ದೆಹಲಿಯಿಂದ ಬೆಂಗಳೂರಿಗೆ ಸಾಗಿಸಲು ದೆಹಲಿಯಲ್ಲಿರುವ ಅದನ್ ಈಕೆಯ ಕೈಗೆ 20 ಸಾವಿರ ರೂ. ಮುಂಗಡವಾಗಿ ನೀಡಿದ್ದನಂತೆ. ರೈಲು ಟಿಕೆಟ್ ಬುಕ್ ಮಾಡಿ, ಉಳಿದ ಹಣ ನಂತರ ನೀಡುವುದಾಗಿ ಹೇಳಿದ್ದನಂತೆ, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎನ್ ಸಿಬಿ ಅಧಿಕಾರಿಗಳು ಹುಬ್ಬಳ್ಳಿ ರೈಲ್ವೆ ಪೊಲೀಸರ ಸಹಾಯದಿಂದ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಶನಿವಾರ ಈಕೆಯನ್ನು ಬಂಧಿಸಿದ್ದಾರೆ.
ನ್ಯಾಯಾಂಗ ಬಂಧನದಲ್ಲಿರುವ ಈಕೆಯನ್ನು ಜ.10 ರವರೆಗೆ ಮೂರು ದಿನಗಳ ಕಾಲ ವಶಕ್ಕೆ ಪಡೆದಿರುವ ಎನ್ಸಿಬಿ ವಿಚಾರಣಿ ನಡೆಸುತ್ತಿದೆ. ದೆಹಲಿಯಲ್ಲಿ ಓದುತ್ತಿರುವ ಕಾಲೇಜು ಯಾವುದು..? ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇನ್ನೂ ಅಕ್ಕಿ ಕಾಳಿನ ರೂಪದಲ್ಲಿರುವ 'ಮಫ್ ಅಪೆಟಮೈನ್' ಡ್ರಗ್ ಭಾರಿ ಭಯಾನಕ ಡ್ರಗ್. ಇದನ್ನು 175 ಡಿಗ್ರಿ ಉಷ್ಣಾಂಶದಲ್ಲಿ ಕಾಯಿಸಿದಾಗ ದ್ರವ ರೂಪಕ್ಕೆ ತಿರುಗುತ್ತದೆ. ಇದನ್ನು ಸಿರಿಂಜ್ ಮೂಲಕ ದೇಹಕ್ಕೆ ನುಗ್ಗಿಸಿ ನಶೆಯಲ್ಲಿ ತೇಲಾಡುತ್ತಾರೆ. ಇನ್ನು ಕೆಲವರು ಪೌಡರ್ ರೂಪದಲ್ಲಿ ಬಳಸುತ್ತಾರೆ. ರೇವ್ನಂಥ ಪಾರ್ಟಿಗಳಲ್ಲಿ ಇದನ್ನು ಬಳಸಲಾಗುತ್ತದೆ. ಈ ಡಗ್ ಬಳಕೆಯಿಂದ ಮನುಷ್ಯನ ದೇಹದ ಕೇಂದ್ರ ನರಮಂಡಲ ವ್ಯವಸ್ಥೆಗೆ ಹಾನಿಯಾಗುತ್ತದೆ. ಅತಿಯಾದ ಬಳಕೆಯಿಂದ ಹೃದಯಾಘಾತ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/01/2022 10:53 pm