ಹುಬ್ಬಳ್ಳಿ: ಸಾಲ ಕೊಟ್ಟವರ ಕಾಟಕ್ಕೆ ಬೇಸತ್ತು ವ್ಯಕ್ತಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿಯ ನ್ಯೂ ಆನಂದ ನಗರದಲ್ಲಿ ನಡೆದಿದೆ.
ಮೆಹಬೂಬಸಾಬ್ ಮುಕ್ತುಂಸಾಬ್ ನಾಲಬಂದ್ (43) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆಟೋ ಚಾಲಕನಾಗಿದ್ದ ಮೆಹಬೂಬಸಾಬ್ ಲೇವಾದೇವಿದಾರ ಪ್ರವೀಣ ಎಂಬುವರಿಂದ ಸಾಲ ಪಡೆದಿದ್ದ. ಸಾಲ, ಬಡ್ಡಿ ವಾಪಸ್ ನೀಡುವಂತೆ ಪ್ರವೀಣ ಹಾಗೂ ಇತರರು ಕಿರುಕುಳ ನೀಡಿದ್ದರು. ಜೀವ ಬೆದರಿಕೆಯನ್ನೂ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮೆಹಬೂಬಸಾಬ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆತನ ಕುಟುಂಬದವರು ಹಳೇ ಹುಬ್ಬಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
11/01/2022 11:12 am