ಹುಬ್ಬಳ್ಳಿ:ಅಪರಿಚಿತ ವ್ಯಕ್ತಿ ಎಸ್.ಬಿ.ಐ. ಯೋನೋ ಮೊಬೈಲ್ App ಸ್ಥಗಿತವಾಗುತ್ತದೆ ಎಂದು ಹೇಳಿ ಅದನ್ನು ಅಪ್ಡೇಟ್ ಮಾಡಬೇಕು ಎಂದು ನಂಬಿಸಿ ಮಹಿಳೆ ಒಬ್ಬರಿಗೆ 3.94.690 ರೂ. ವಂಚಿಸಿದ್ದಾನೆ.
ಧಾರವಾಡ ಡಾ. ಅನುಶ್ರೀ ಅಗ್ನಿಹೋತ್ರ ಎಂಬುವರಿಗೆ ಅಪರಿಚಿತ ವ್ಯಕ್ತಿ ಎಸ್.ಬಿ.ಐ. App ಸದ್ಯದಲ್ಲೇ ಸ್ಥಗಿತವಾಗುತ್ತೆ. ತಕ್ಷಣ ನೀವು ಅಪ್ಡೇಟ್ ಮಾಡಬೇಕು ಎಂದು ಮೊದಲು ಸಂದೇಶ ಕಳಿಸಿದ್ದಾನೆ.
ಸಂದೇಶದಲ್ಲಿರುವ ಲಿಂಕ್ ನಂಬಿ ತೆರೆದಾಗ ಪ್ಯಾನ್ ಕಾರ್ಡ್ ನಂಬರ್, ಜನ್ಮದಿನಾಂಕ ಮತ್ತು ಒಟಿಪಿ ಎಲ್ಲವನ್ನು ಹಾಕಿ ಸಬ್‌ಮೀಟ್ ಮಾಡಿದ್ದಾರೆ. ಅದಾದ ಬಳಿಕ ಅವರ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣವನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/01/2022 12:05 pm