ಹುಬ್ಬಳ್ಳಿ: ನಾವು ಚಿನ್ನ, ಹಣ ಕಳ್ಳತನ ಮಾಡುವವರನ್ನು ನೋಡಿದ್ದೇವೆ. ಆದರೆ ಇಲ್ಲಿ ಕಳ್ಳತನ ಮಾಡಿದ್ದು ಮಾತ್ರ ಡಿಫರೆಂಟ್. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ ವಿಚಿತ್ರ ಕಳ್ಳತನ ಪ್ರಕರಣ. ಹಾಗಿದ್ದರೇ ಏನಿದು ಡಿಪರೆಂಟ್ ಕಳ್ಳತನ ಪ್ರಕರಣ ಅಂತೀರಾ ತೋರಿಸ್ತೀವಿ ನೋಡಿ...
ಹೀಗೆ ಹೊಲದಲ್ಲಿ ನಿಂತು ಮಣ್ಣನ್ನು ತೋರಿಸುತ್ತಿರುವ ರೈತ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ತೆಗೆದಿರುವ ಗುಂಡಿ. ಇದು ಯಾವುದೋ ನಿಧಿ ಆಸೆಗೆ ತೆಗೆದಿರುವ ಮಣ್ಣಂತೂ ಅಲ್ಲವೇ ಅಲ್ಲ. ಆದರೆ ಈ ಜಮೀನಿನಲ್ಲಿರುವ ಮಣ್ಣನ್ನೇ ಕಳ್ಳರು ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು. ಬಡ ರೈತನ ಜಮೀನಲ್ಲಿರುವ ಮಣ್ಣು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ತಾಲೂಕಿನ ಅಂಚಟಗೇರಿ ಗ್ರಾಮದ ಕಾಶೀನಾಥ ಖೊಡೆ ಎಂಬ ರೈತನ ಜಮೀನನಲ್ಲಿ ನಡೆದಿದೆ. ರಾತ್ರೋ ರಾತ್ರಿ ಜಮೀನಿನ ಮಣ್ಣು ಕಳವು ಮಾಡಿದ ಭೂಪರು. ಇಟ್ಟಿಗೆ ತಯಾರಿಸಲು ಫಲ ನೀಡುವ ಮಣ್ಣು ಕಳ್ಳತನ ಮಾಡಿದ್ದಾರೆ.
ಇನ್ನೂ 15 ಲಕ್ಷ ಬೆಲೆಬಾಳುವ ಮಣ್ಣು ಕಳ್ಳತನ ಮಾಡಿದ ಚಾಲಾಕಿ ಕಳ್ಳರು ರೈತನ ಬದುಕಿನಲ್ಲಿ ಕೊಡಲಿ ಪೆಟ್ಟು ಹಾಕಿದ್ದಾರೆ. ಇದರಿಂದ ಬಡ ರೈತ ಕಂಗಾಲಾಗಿದ್ದಾನೆ. ಕೇವಲ 22 ಗುಂಟೆ ಜಮೀನು ಹೊಂದಿದ ರೈತನ ಜಮೀನನಲ್ಲಿ ಪ್ಲ್ಯಾನ್ ಮಾಡಿ ಮಣ್ಣಿನ ಕಳ್ಳತನ ಮಾಡಿದ್ದಾರೆ. ಇರುವ ಚಿಕ್ಕ ಜಮೀನಿನಲ್ಲಿ ತೋಟ ಮಾಡಿದ್ದ ಅನ್ನದಾತ. ಆದರೆ ಈ ಕಳ್ಳರು ತೋಟದಲ್ಲಿನ ಗಿಡಗಳನ್ನು ನಾಶ ಪಡಿಸಿ ಮಣ್ಣು ಕಳ್ಳತನ ಮಾಡಿದ್ದಾರೆ. ಮಣ್ಣು ಕಳವು ಮಾಡಿದವರ ವಿರುದ್ಧ ನ್ಯಾಯ ಕೊಡಿಸಲು ರೈತ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾನೆ. ಇನ್ನೂ ವಿಶೇಷ ಅಂದರೆ ಒಂದು ಜೆಸಿಬಿ ಹಾಗೂ ಟ್ರಕ್ ಅನ್ನು ಬಡ ರೈತ ಪೊಲೀಸರಿಗೆ ಒಪ್ಪಿಸಿದ್ದಾನೆ.
ಇನ್ನೂ ವಾಸುದೇವ ಉದೋಜಿ ಎನ್ನುವವರು ಮಣ್ಣು ಕಳ್ಳತನ ಮಾಡಿದ್ದು, ಅವರಿಂದ ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾನೆ. ಈ ಕುರಿತು ಈ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನ್ನ ಕೊಡುವ ಮಣ್ಣಿಗೆ ಕನ್ನ ಹಾಕಿರುವ ಕಳ್ಳರಿಗೆ ತಕ್ಕ ಶಿಕ್ಷೆ ನೀಡಿ ಅನ್ನದಾತನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂಬುವುದು ರೈತ ಸಮುದಾಯದ ಆಗ್ರಹವಾಗಿದೆ.
Kshetra Samachara
30/12/2021 04:34 pm