ಧಾರವಾಡ: ವಿದ್ಯಾಕಾಶಿ, ಕವಿ, ಸಾಹಿತಿಗಳ ತವರೂರು ಎಂಬ ಹೆಸರುಗಳಿಂದ ಕರೆಯಿಸಿಕೊಳ್ಳುವ ಧಾರವಾಡದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅಪ್ರಾಪ್ತ ಬಾಲಕಿ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದು, ಇಡೀ ಧಾರವಾಡವೇ ಬೆಚ್ಚಿ ಬಿದ್ದಿದೆ.
ಧಾರವಾಡದ ಲಕ್ಷ್ಮೀಸಿಂಗನಕೇರಿಯ ಅಪ್ರಾಪ್ತ ಬಾಲಕಿ ಮೇಲೆ ನಾಲ್ಕೈದು ಜನ ಹುಡುಗರ ಗುಂಪು ಅತ್ಯಾಚಾರವೆಸಗಿದೆ. ಆ ಪೈಕಿ ಮೂವರನ್ನು ಪೊಲೀಸರು ಪತ್ತೆ ಮಾಡಿದ್ದು, ಉಳಿದವರಿಗಾಗಿ ಶೋಧ ನಡೆಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದವರು ಅದೇ ಬಡಾವಣೆಯ ಯುವಕರು ಎಂದು ಗೊತ್ತಾಗಿದೆ. ಧಾರವಾಡ ಬಾಸೆಲ್ ಮಿಶನ್ ಕಾಲೇಜಿನ ವಿದ್ಯಾರ್ಥಿನಿಯಾದ ಬಾಲಕಿಯನ್ನು ನಗರದ ಹೊರವಲಯಕ್ಕೆ ಒತ್ತಾಯದಿಂದ ಕರೆದುಕೊಂಡು ಹೋದ ಅಪ್ರಾಪ್ತ ಯುವಕರು,
ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಶಹರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/12/2021 03:57 pm