ನವಲಗುಂದ : ನವಲಗುಂದ ಪಟ್ಟಣದ ಹೃದಯ ಭಾಗದಲ್ಲಿರುವ ಗಾಂಧಿ ಮಾರ್ಕೆಟನಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆಂದು ನಿರ್ಮಿಸಿರುವಂತಹ ಪಾರ್ಕಿಂಗ್ ಶೆಡ್ ಹೆಸರಲ್ಲಿ ಪುರಸಭೆಯ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ನಗರದ ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಆರೋಪಿಸಿದ್ದಾರೆ.
ಎಸ್ ಸನ 2016-17 ರಲ್ಲಿ ನಿರ್ಮಾಣಗೊಂಡ ಪಾರ್ಕಿಂಗ ಶೆಡ್ ಗೆ 7 ಲಕ್ಷದ 60 ಸಾವಿರ ರೂಪಾಯಿ ಬಿಲ್ ತೆಗೆದು ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಶೆಡ್ ನಲ್ಲಿ ಏಳು ಲಕ್ಷದ ಅರವತ್ತು ಸಾವಿರ ರೂಪಾಯಿಗಳಷ್ಟು ಕೆಲಸವೇ ಆಗಿಲ್ಲಾ, ಹಾಗಾಗಿ ಯೋಜನಾ ನಿರ್ದೇಶಕರು ಈ ಕುರಿತು ತನಿಖೆಯನ್ನು ಮಾಡಬೇಕು. 2016-17 ರ ಸಮಯದಲ್ಲಿದ್ದ ಮುಖ್ಯಾಧಿಕಾರಿಗಳು, ಇಂಜನೀಯರ, ಶೆಡ್ ನಿರ್ಮಾಣ ಮಾಡಿದ ಗುತ್ತಿಗೆದಾರನನ್ನು ತನಿಖೆಗೆ ಒಳಪಡಿಸಬೇಕು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು ಎಂದು ಯರಗುಪ್ಪಿ ಆಗ್ರಹಿಸಿದರು.
Kshetra Samachara
26/12/2021 12:51 pm