ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಖೊಟ್ಟಿ ದಾಖಲೆ ಸೃಷ್ಟಿಸಿದ ಪಾಲಿಕೆ ಸದಸ್ಯರು, ಕೊಟ್ಟವರು ತಹಶೀಲ್ದಾರ ಸಾಹೇಬ್ರು

ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಈಗಾಗಲೇ ಗೆಲುವು ಸಾಧಿಸಿರುವ ಪಾಲಿಕೆಯ ಮೂವರು ಸದಸ್ಯರ ಮೇಲೆ ಇದೀಗ ಖೊಟ್ಟಿ ಜಾತಿ ಪ್ರಮಾಣಪತ್ರ ನೀಡಿರುವ ಆರೋಪ ಕೇಳಿ ಬಂದಿದೆ. ಈಗಾಗಲೇ ಈ ಪ್ರಕರಣ ಧಾರವಾಡದ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮೂವರು ಅಭ್ಯರ್ಥಿಗಳಿಗೆ ತಹಶೀಲ್ದಾರ ಕಚೇರಿಯಿಂದ ನಕಲಿ ಜಾತಿ ಪ್ರಮಾಣಪತ್ರ ಪೂರೈಕೆ ಮಾಡಲಾಗಿದೆ.

ಸದ್ಯ ತಾವು ಕೊಟ್ಟಿರುವ ಜಾತಿ ಪ್ರಮಾಣಪತ್ರ ನಕಲಿ ಎಂದು ಸಾಬೀತಾದರೆ ಈ ಮೂವರೂ ಸದಸ್ಯರು ತಮ್ಮ ಸದಸ್ಯತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‌ಗಳಿಗೆ ಈಗಾಗಲೇ ಚುನಾವಣೆ ನಡೆದು ಸದಸ್ಯರೂ ಕೂಡ ಆಯ್ಕೆಯಾಗಿದ್ದಾರೆ. ಮೇಯರ್, ಉಪಮೇಯರ್ ಸ್ಥಾನಕ್ಕೆ ಮೀಸಲಾತಿಯೂ ಇನ್ನೇನು ಪ್ರಕಟವಾಗಲಿದೆ. ಅದರೊಳಗೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಈ ನಕಲಿ ಜಾತಿ ಪ್ರಮಾಣಪತ್ರಗಳ ವಿಚಾರಣೆಯ ತೀರ್ಪು ಪ್ರಕಟವಾಗಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದ 13 ನೇ ವಾರ್ಡಿನಿಂದ ಸುರೇಶ ಬೇದರೆ, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ವಾರ್ಡ್ ನಂಬರ್ 20 ರಿಂದ ಕವಿತಾ ಕಬ್ಬೇರ ಹಾಗೂ ವಾರ್ಡ್ ನಂಬರ್ 23 ರಿಂದ ಮಂಜುನಾಥ ಬಡಕುರಿ ಅವರು ಚುನಾವಣಾ ಆಯೋಗ ನಿರ್ಧಿಷ್ಟಪಡಿಸಿದಂತೆ ತಮಗೆ ಬೇಕಾದ ರೀತಿಯಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ, ಚುನಾವಣೆಯಲ್ಲಿ ಗೆಲುವು ಕೂಡ ದಾಖಲಿಸಿದ್ದಾರೆ. ಹೀಗಾಗಿ ಇವರ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ರಾಜು ಅಂಬೋರೆ ಹಾಗೂ ಇನ್ನುಳಿದ ಇಬ್ಬರು ಪರಾಜಿತ ಅಭ್ಯರ್ಥಿಗಳು ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

Edited By : Shivu K
Kshetra Samachara

Kshetra Samachara

24/12/2021 04:41 pm

Cinque Terre

67.18 K

Cinque Terre

11

ಸಂಬಂಧಿತ ಸುದ್ದಿ