ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿಲಿಟರಿ ಮ್ಯಾನ್ ಎಂದು ಹೆಸರು ಹೇಳಿ ಸೈಕಲ್ ಅಂಗಡಿಯವನಿಗೆ ವಂಚನೆ

ಹುಬ್ಬಳ್ಳಿ:ಮಿಲಿಟರಿ ಕ್ಯಾಂಟೀನ್‌ಗೆ 20 ಸೈಕಲ್ ಬೇಕಾಗಿದೆ ಎಂದು ನಂಬಿಸಿ, ಆನ್ಲೈನ್‌ಲ್ಲಿ 70 ಸಾವಿರ ರೂ . ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಘಟನೆ ನಗರದ ಸೈಬರ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಿಕರ ರಸ್ತೆಯ ದೀಪಕ್ ಸೈಕಲ್ ಅಂಗಡಿಯ ವ್ಯವಸ್ಥಾಪಕ ಸುನೀಲ್ ವಕ್ಕುಂದ ವಂಚನೆಗೆ ಒಳಗಾದವರು. 20 ಸೈಕಲ್‌ಗೆ ಸುನೀಲ್‌ 1.36 ಲಕ್ಷ ರೂ.ಬಿಲ್‌ನ್ನು ವಂಚಕನ ವಾಟ್ಸ್ ಆ್ಯಪ್‌ಗೆ ಕಳುಹಿಸಿದ್ದರು.

ನಂತರ ಸೈಕಲ್ ಗಳನ್ನು ಕ್ಯಾಂಟೀನ್ ಬಳಿ ಸಾಗಿಸಿದಾಗ, ಕ್ಯಾಂಟೀನ್ ನಿಯಮದ ಪ್ರಕಾರ ನಾವು ಕಳುಹಿಸಿದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅದಕ್ಕೆ 1 ರೂ ಸಂದಾಯ ಮಾಡಿದರೆ, ದುಪ್ಪಟ್ಟು ಬರುತ್ತದೆ. ಆ ಮೂಲಕವೇ ಸೈಕಲ್ ಹಣ ಪಾವತಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ವ್ಯವಸ್ಥಾಪಕರು ಹಂತ ಹಂತವಾಗಿ ಹಣ ವರ್ಗಾಯಿಸಿ ವಂಚನೆಗೆ ಒಳಗಾಗಿದ್ದಾರೆ. ನಂತರ ಇದು ವಂಚನೆ ಎಂದು ತಿಳಿದು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Edited By :
Kshetra Samachara

Kshetra Samachara

18/12/2021 03:12 pm

Cinque Terre

20.76 K

Cinque Terre

0

ಸಂಬಂಧಿತ ಸುದ್ದಿ