ಹುಬ್ಬಳ್ಳಿ- ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉದುಪುಡಿಯ ಶಿವಸಾಗರ ಶುಗರ್ಸ್ ಆ್ಯಂಡ್ ಅಗ್ರೋ ಪ್ರೊಡಕ್ಟ್ ಕಂಪನಿಯ ಅಕ್ರಮ ವ್ಯವಹಾರಗಳ ಹಿನ್ನೆಲೆಯಲ್ಲಿ, ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ ಸೇರಿದಂತೆ ನಿರ್ದೇಶಕರು ಬೇಕಾಬಿಟ್ಟಿಯಾಗಿ, ನಕಲಿ ದಾಖಲೆ ಸೃಷ್ಟಿ ಮಾಡಿ, ಭಾರಿ ಅವವ್ಯಹಾರ ಮಾಡದ್ದಾರೆಂದು ಈಗ ಕಂಪನಿಯ ಮಾಜಿ ನಿರ್ದೇಶಕರು, ಸದಸ್ಯರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ರಾಜೇಂದ್ರ ಪಾಟೀಲ ಸೇರಿದಂತೆ ಏಳು ಜನರು ಶಿವಸಾಗರ ಶುಗರ್ಸ್ ಆ್ಯಂಡ್ ಅಗ್ರೋ ಪ್ರೊಡಕ್ಟ್ ಕಂಪನಿಗೆ 40 ಸಾವಿರದಷ್ಟು ಷೇರುದಾರರಿದ್ದು, ಇವರೆಲ್ಲರನ್ನು ನಿರ್ಲಕ್ಷಿಸಿ ಸರ್ವ ಸಾಧರಣ ಸಭೆ ಕರೆಯದೆ ಸರ್ವಾಧಿಕಾರದಿಂದ ವರ್ತಿಸಿದ್ದಾರಂತೆ, ಅಲ್ಲದೆ 2014ರ ಫೆ. 14 ರಂದು ನಕಲಿ ದಾಖಲೆ ಸೃಷ್ಟಿ ಮಾಡಿ 10 ಜನ ನಿರ್ದೇಶಕರನ್ನು ಏಕಾಏಕಿ ತೆಗೆದುಹಾಕಿದ್ದರು. ಕಾರ್ಖಾನೆಯ ಆರಂಭಕ್ಕೆ ವಿವಿಧ ಬ್ಯಾಂಕುಗಳಿಂದ ಸಾಲ ಪಡೆಯಲಾಗಿದ್ದು, ಸಾಲದ ಕಂತು ಪಾವತಿಸಿಲ್ಲ. ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ಬಿಲ್ ಹಾಗೂ ಟ್ರ್ಯಾಕ್ಟ್ರ್‌ಗಳಿಗೆ ಹಣ ನೀಡದೆ ವಂಚನೆ ಮಾಡಿದ್ದಾರೆ. ಆದ್ದರಿಂದ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು, ಸಮಗ್ರ ತನಿಖೆ ಮಾಡಿ ತಪ್ಪಿಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
Kshetra Samachara
11/12/2021 05:35 pm