ಹುಬ್ಬಳ್ಳಿ- ಅದು ಪ್ರತಿಷ್ಠಿತ ದೇವಸ್ಥಾನ, ಪುರಾತನ ಕಾಲದಿಂದಲೂ ಬಂದಂತಹ ಈ ದೇವಸ್ಥಾನಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಕಳಿಸಿದ ವಾಟ್ಸ್ ಆಫ್ ಸಂದೇಶ ಈಗ ಗ್ರಾಸವಾಗಿದೆ. ಅಷ್ಟಕ್ಕೂ ಆ ದೇವಸ್ಥಾನ ಯಾವುದು ಅಂತಿರಾ ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ..
ಹೌದು,,, ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಶಿರಸಂಗಿ ಕಾಳಿಕಾ ದೇವಿ ದೇವಸ್ಥಾನಕ್ಕೆ ದೇಣಿಗೆ, ದವಸ ಧಾನ್ಯ ನೀಡಬೇಡಿ ಎಂದು ಧಾರವಾಡ ವಿಶ್ವಕರ್ಮ ಸಮಾಜದ ವಾಟ್ಸಾಪ್ ಗ್ರೂಪಿನಲ್ಲಿ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ್ ಅವರು ಕಳಿಸಿರುವ ಸಂದೇಶ, ಅವಮಾನ ಮಾಡಿದೆ ಎಂದು ದೇವಸ್ಥಾನದ ಅರ್ಚಕರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಈ ಸಂದೇಶದ ಬಗ್ಗೆ ತನಿಖೆ ನಡೆಸಿ, ಸತ್ಯಾಂಶವನ್ನು ಹೊರತರಬೇಕೆಂದು ಸೈಬರ್ ಕ್ರೈಂ ಬಳಿ ಹೋಗಿದ್ದಾರೆ. ಯಾರು ಇಂತಹ ಘಟನೆ ಮಾಡುವವರೋ ಅವರ ವಿರುದ್ಧ ಕಾನೂನು ಮೂಲಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
Kshetra Samachara
11/12/2021 03:47 pm