ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಂಡತಿ ಕಳುಹಿಸಲು ನಿರಾಕರಿಸಿದ ಅತ್ತೆಗೆ ಬ್ಲೇಡ್ ನಿಂದ ಇರಿದ ಅಳಿಯ

ಹುಬ್ಬಳ್ಳಿ: ನಾಲ್ಕು ವರ್ಷಗಳಿಂದ ತವರು ಮನೆ ಸೇರಿರುವ ಹೆಂಡತಿಯನ್ನು ವಾಪಸ್ ಕಳುಹಿಸಲಿಲ್ಲ ಎಂಬ ಆಕ್ರೋಶದಿಂದ, ಅಳಿಯನೊಬ್ಬ ಅತ್ತೆಗೆ ಬ್ಲೇಡ್ ನಿಂದ ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ನವನಗರದ ನಿವಾಸಿ ಸೋಮವ್ವ ಮಲ್ಲಾಡ ಹಲ್ಲೆಗೀಡಾದವರು. ಪಡದಯ್ಯನ ಹಕ್ಕಲದ ರಮೇಶ ದೊಡ್ಡಮನಿ ಎಂಬ ಅಳಿಯನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.

ನಾಲೈದು ವರ್ಷಗಳ ಹಿಂದೆ ಪತಿ ರಮೇಶನೊಂದಿಗೆ ಜಗಳವಾಡಿ ಪತ್ನಿ ತವರು ಸೇರಿದ್ದರು. ಡಿ .7 ರಂದು ಪತ್ನಿ ಜೊತೆ ರಮೇಶ ಜಗಳ ತೆಗೆದು ಹಲ್ಲೆ ನಡೆಸಿದ್ದ. ಈ ವೇಳೆ ಬಿಡಿಸಲು ಮುಂದಾಗಿದ್ದ ಅತ್ತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬ್ಲೇಡ್ ನಿಂದ ಹಲ್ಲೆ ಮಾಡಿ ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಈ ಸಂಬಂದ ಎಪಿಎಂಸಿ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

10/12/2021 02:29 pm

Cinque Terre

20.33 K

Cinque Terre

1

ಸಂಬಂಧಿತ ಸುದ್ದಿ